ಘಟಪ್ರಭಾ:ಪಾಪು ಧಾರೆ ಅವರು ಮೇಲೆ ಮಾಡಲಾಗುತ್ತಿರುವ ಆರೋಪ ದುರುದ್ದೇಶದಿಂದ ಕೂಡಿದೆ : ಯಶೋದಾ ಬಿರಡಿ
ಪಾಪು ಧಾರೆ ಅವರು ಮೇಲೆ ಮಾಡಲಾಗುತ್ತಿರುವ ಆರೋಪ ದುರುದ್ದೇಶದಿಂದ ಕೂಡಿದೆ : ಯಶೋದಾ ಬಿರಡಿ
ಘಟಪ್ರಭಾ ಡಿ 31 : ಧಾರವಾಡದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವಿಭಾಗೀಯ ಅಧ್ಯಕ್ಷರಾದ ಪಾಪು ಧಾರೆ ಅವರು ಮೇಲೆ ಮಾಡಲಾಗುತ್ತಿರುವ ಆರೋಪ ದುರುದ್ದೇಶದಿಂದ ಕೂಡಿದೆ ಎಂದು ಕ.ರ.ವೇ ಸ್ವಾಭಿಮಾನಿ ಬಣದ ಬೆಳಗಾವಿ ಜಿಲ್ಲಾಧ್ಯಕ್ಷೆ ಯಶೋದಾ ಬಿರಡಿ ಆರೋಪಿಸಿದರು.
ಅವರು ಸೋಮವಾರ ಸ್ಥಳೀಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಪು ಧಾರೆ ಅವರು ಅನೇಕ ವರ್ಷಗಳಿಂದ ಕನ್ನಡ ನಾಡು ನುಡಿ ಹಾಗೂ ನೆಲ ಜಲಕ್ಕಾಗಿ ಹೋರಾಡುತ್ತ, ಕನ್ನಡ ನಾಡು ಕಟ್ಟುವ ಕೆಲಸ ಜೊತೆಗೆ ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದವರ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಮತ್ತು ದುರುದ್ದೇಶದಿಂದ ಕೂಡಿವೆ.
ಈ ಬಗ್ಗೆ ದೂರು ನೀಡಿರುವ ಸಂಸ್ಥೆ ಸ್ವತಃ ಪಾಪು ಧಾರೆ ಅವರು ನಮ್ಮ ಹತ್ತಿರ ಹಣದ ವಿಷಯಕ್ಕೆ ಬಂದಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಅದರೆ ಕೆಲ ಕಿಡಗೇಡಿಗಳು ಪಾಪು ಧಾರೆ ಅವರ ಹೆಸರಿಗೆ ಧಕ್ಕೆ ತರುವ ಕೆಲಸದಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾನಗಳಲ್ಲಿ ಅವರ ಹೆಸರಿನಲ್ಲಿ ತಪ್ಪು ಮತ್ತು ಹೆಸರಿಗೆ ಕಳಂಕ ತರುವ ರೀತಿಯಲ್ಲಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಂಘಟನೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿಡಗೇಡಿಗಳ ಈ ಕೃತ್ಯಗಳಿಗೆ ನಮ್ಮ ಕಾರ್ಯಕರ್ತರು ಕಿವಿ ಕೂಡಬಾರದು ಹಾಗೂ ತಕ್ಕ ಸಮಯ ನೋಡಿ ಈ ಕಿಡಗೇಡಿಗಳಿಗೆ ಪಾಠ ಕಲಿಸಲಾಗುವುದು. ಇವರು ನಡೆಸುತ್ತಿರುವ ಚಟುವಟುಕೆಗಳ ವಿರುದ್ಧ ದಾಖಲೆಗಳು ಸಂಗ್ರಹಿಸಿ ಅವರ ವಿರುದ್ಧ ಮಾನನಷ್ಠ ಮುಕ್ಕದ್ದಮೆ ದಾಖಲಿಸಲಾಗುವುದು ಎಂದು ಯಶೋದಾ ಬಿರಡಿ ಎಚ್ಚರಿಸಿದರು.
ಪ್ರತಿಕಾ ಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ರಮೇಶ ಜಿರಲಿ, ಜಿಲ್ಲಾ ಕಾರ್ಯಾಧ್ಯಕ್ಷ ನಾಗರಾಜ ಚಚಡಿ, ಘಟಪ್ರಭಾ ಘಟಕ ಅದ್ಯಕ್ಷ ಬಸವರಾಜ ಹುಬ್ಬಳಿ, ಬಾಳೇಶ ನಾಯಿಕ ಇದ್ದರು.