RNI NO. KARKAN/2006/27779|Sunday, June 15, 2025
You are here: Home » breaking news » ಘಟಪ್ರಭಾ:ಶಿಂದಿಕುರಬೇಟ ಪಿಕೆಪಿಎಸ್‍ಗೆ ತಾಲೂಕಾ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪ್ರದಾನ

ಘಟಪ್ರಭಾ:ಶಿಂದಿಕುರಬೇಟ ಪಿಕೆಪಿಎಸ್‍ಗೆ ತಾಲೂಕಾ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪ್ರದಾನ 

ಶಿಂದಿಕುರಬೇಟ ಪಿಕೆಪಿಎಸ್‍ಗೆ ತಾಲೂಕಾ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪ್ರದಾನ

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಸೆ 21 :

ಸಮೀಪದ ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸನ್ 2017-18ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಗೋಕಾಕ ತಾಲೂಕಾ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ ನಿ, ಬೆಂಗಳೂರು ಇವರು ಶುಕ್ರವಾರದಂದು ಬೆಳಗಾವಿಯ ಗಾಂಧಿ ಭವನದಲ್ಲಿ ಜರುಗಿದ ಡಿಸಿಸಿ ಬ್ಯಾಂಕಿನ 98ನೇ ವಾರ್ಷಿಕ ಸಭೆಯಲ್ಲಿ ಪ್ರಶಸ್ತಿ ಪತ್ರದೊಂದಿಗೆ ಹತ್ತು ಸಾವಿರ ರೂ. ಚೆಕ್‍ನ್ನು ಬಹುಮಾನವಾಗಿ ನೀಡಿದ ಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಅವರು ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಗುಡಕೇತ್ರ ಹಾಗೂ ಕಾರ್ಯದರ್ಶಿ ರಮೇಶ ಪರಕನಟ್ಟಿ ಅವರನ್ನು ಜಂಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ತಾಲೂಕಾ ನಿಯಂತ್ರಣಾಧಿಕಾರಿ ಮಹಾಂತೇಶ ಕುರಬೇಟ, ಬ್ಯಾಂಕ ನಿರೀಕ್ಷಕ ಸನ್ನಿ ಪಾಟೀಲ, ಸಹಕಾರಿ ಸಂಘದ ಉಪಾಧ್ಯಕ್ಷ ಬಡಪ್ಪ ಬಂಡಿವಡ್ಡರ, ಸದಸ್ಯರುಗಳಾದ ಶ್ರೀಶೈಲ ಮಾನೆಪ್ಪಗೊಳ, ಗಂಗಪ್ಪ ಖಂಡುಗೋಳ, ದಿನೇಶ ಕಡೇಲಿ, ಸಿದ್ದಲಿಂಗ ನೇರ್ಲಿ,ಸಿದ್ದಪ್ಪ ಸತ್ತಿಗೇರಿ, ವಿಠ್ಠಲ ಜೋತೆನ್ನವರ,ಪರಸಪ್ಪ ಪಾಟೀಲ,ಇಂದಿರಾ ಕಬ್ಬೂರ, ಕಸ್ತೂರಿ ಮನೆಪ್ಪಗೋಳ, ಕೆಂಪಣ್ಣಾ ದೇವರಮನಿ, ಸಿಬ್ಬಂದಿಗಳಾದ ರಮೇಶ ಪರಕನಟ್ಟಿ, ಮಂಜುನಾಥ ಮಾನೆಪ್ಪಗೋಳ, ದುಂಡಪ್ಪ ಮಾನೆಪ್ಪಗೋಳ,ಬಸವರಾಜ ಹೊಸಪೇಟಿ, ರಮೇಶ ಜಾಧವ, ಸುರೇಶ ಜೋತೆನ್ನವರ ಇದ್ದರು.

Related posts: