ಗೋಕಾಕ:ಐಎಂಎ ಗೋಕಾಕ್ ಶಾಖೆಗೆ ಪ್ರೆಸಿಡೆಂಟ್ ಅಪ್ರೀಸಿಯೇಷನ್ ಅವಾರ್ಡ್

ಐಎಂಎ ಗೋಕಾಕ್ ಶಾಖೆಗೆ ಪ್ರೆಸಿಡೆಂಟ್ ಅಪ್ರೀಸಿಯೇಷನ್ ಅವಾರ್ಡ್
ಗೋಕಾಕ ಅ 26 : ಶಿವಮೊಗ್ಗದಲ್ಲಿ ನಿನ್ನೆ ನಡೆದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ರಾಜ್ಯ ಶಾಖೆಯ 92 ನೆಯ “ಮೆಡಿಕಾನ್” ವಾರ್ಷಿಕ ಸಮ್ಮೇಳನದಲ್ಲಿ, ಐಎಂಎ ಗೋಕಾಕ್ ಶಾಖೆಯು ಸಲ್ಲಿಸಿದ ಉತ್ತಮ ಕಾರ್ಯವನ್ನು ಗುರುತಿಸಿ ಪ್ರೆಸಿಡೆಂಟ್ ಅಪ್ರೀಸಿಯೇಷನ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯದ ಆರೋಗ್ಯ ಸಚಿವರಾದ ಸನ್ಮಾನ್ಯ ಯು.ಟಿ ಖಾದರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು
ಇದೇ ಸಂದರ್ಭದಲ್ಲಿ ಗೋಕಾಕ್‍ನ ಸ್ತ್ರೀರೋಗ ತಜ್ಞೆ ಡಾ. ಜ್ಯೋತಿ ಎಸ್. ಘೋಂಗಡೆಮಠ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಡಿಸ್ಟಿಂಗ್ವಿಶ್ಡ್ ಡಾಕ್ಟರ್ ಫೆಲಿಸಿಟೇಶನ್ ಅವಾರ್ಡ್ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಐಎಂಎ ಗೋಕಾಕ್ ಶಾಖೆಯು ವೈದ್ಯರ ಒಗ್ಗಟ್ಟು, ವೈದ್ಯಕೀಯ ಶಿಕ್ಷಣ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಸಲ್ಲಿಸುತ್ತಿರುವ ಸೇವೆಗೆ ಈ ಪ್ರಶಸ್ತಿ ಮತ್ತೊಂದು ಗೌರವವಾಗಿದೆ.
ಈ ಸಂದರ್ಭದಲ್ಲಿ ಐಎಂಎ ಗೋಕಾಕ್ ಶಾಖೆಯ ಪರವಾಗಿ ಮಹಿಳಾ ಘಟಕದ ಪೂರ್ವ ಅಧ್ಯಕ್ಷರಾದ ಡಾ. ಜ್ಯೋತಿ ಎಸ್. ಘೋಂಗಡೆಮಠ, ಅಧ್ಯಕ್ಷರಾದ ಡಾ. ವಿಶ್ವನಾಥ್ ಶಿಂಧೋಳಿಮಠ, ಕಾರ್ಯದರ್ಶಿ ಡಾ. ಉಮೇಶ್ ನಿಪ್ಪಾಣಿ, ಡಾ. ಕೆಂಪಣ್ಣ ಹಳಿಗೌಡರ, ಹಾಗೂ ಡಾ. ಗಂಗಾಧರ ಉಮಾರಾಣಿ ಅವರು ಉಪಸ್ಥಿತರಿದ್ದರು.
ಗೋಕಾಕ್ ಶಾಖೆಯ ಸಾಧನೆಗೆ ವೈದ್ಯಕೀಯ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಗೌರವವು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆಯಾಗಿದೆ.
