ಗೋಕಾಕ:ಬಣಜಿಗʼರು ಬಸವಣ್ಣನವರ ನಿಜವಾದ ವಾರಸುದಾರರು : ಅಶೋಕ ಹಂಚಲಿ

ʼಬಣಜಿಗʼರು ಬಸವಣ್ಣನವರ ನಿಜವಾದ ವಾರಸುದಾರರು : ಅಶೋಕ ಹಂಚಲಿ
ಗೋಕಾಕ ಜು 19 : ʼಬಣಜಿಗʼರು ಬಸವಣ್ಣನವರ ನಿಜವಾದ ವಾರಸುದಾರರು ಎಂದು ಬಸವನ ಬಾಗೇವಾಡಿಯ ಶಿಕ್ಷಕ-ಸಾಹಿತಿ ಅಶೋಕ ಹಂಚಲಿ ಹೇಳಿದರು.
ರವಿವಾರದಂದು ಇಲ್ಲಿನ ಜೆ.ಎಸ್.ಎಸ್. ಕಾಲೇಜು ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಗೋಕಾಕ ತಾಲ್ಲೂಕು ಘಟಕ ಆಶ್ರಯದಲ್ಲಿ ಜರುಗಿದ ಬಣಜಿಗ ಸಮಾಜದ 19ನೇ ವಾರ್ಷಿಕೋತ್ಸವ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದಾ ಅವರು, ಬಣಜಿಗರು ಬೇರೊಬ್ಬರದ್ದನ್ನು ಬಯಸುವವರಲ್ಲ ಮತ್ತು ತಮ್ಮದಾದ್ದನ್ನು ಪರರಿಗೆ ಬಿಟ್ಟುಕೊಡುವವರಲ್ಲ. ಹೀಗಾಗಿ, ಬಣಗರೆಂದರೆ ಸದಾ ಪರರ ಒಳ್ಳೆಯದನ್ನೇ ಬಯಸುವ ಮನಸ್ಥಿತಿಯುಳ್ಳವರು ಎಂದರು.
ಅಥಣಿ ಗಚ್ಚಿನಮಠ, ಮುಂಡರಗಿʼಯ ತೋಂಟದಾರ್ಯಮಠ, ಕಲಬುರ್ಗಿಯ ಶರಣ ಬಸವೇಶ್ವರಮಠ ಆದಾಯಾಗಿ ಸುಮಾರು 176 ಮಠಗಳ ಪೀಠಾಧಿಪತಿಗಳು ಬಣಜಿಗರೇ ಆಗಿದ್ದರು ಎಂಬ ಸತ್ಯವನ್ನು ನಾವಿಂದು ಜ್ಞಾಪಿಸಿಕೊಳ್ಳೋಣ ಎಂದ ಅವರು
ಕೊಡುಗೈ ದಾನಿಗಳು, ಮಠ-ಮಾನ್ಯಗಳ ಏಳ್ಗೆ, ಶಿಕ್ಷಣ ಪ್ರಸರಣ ಮೊದಲಾದವುಗಳ ಮೂಲಕ ಸಮಾಜದ ಶ್ರೇಯಸ್ಸಿಗಾಗಿ ವಾರದ ಮಲ್ಲಪ್ಪ, ಡಾ. ಶಿವಲಿಂಗ ಮಹಾಂತಶೆಟ್ಟಿ, ಡಾ. ಎಂ.ಸಿ.ಮೋದಿ ಮೊದಲಾದ ದಿಗ್ಗಜರು, ಹೆಸರಾಂತ ರಾಜಕಾರಣಿಗಳಾದ ಮಾಜಿ ಉಪ-ರಾಷ್ಟ್ರಪತಿ ಬಿ.ಡಿ.ಜತ್ತಿ, ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ಜೆ.ಎಚ್.ಪಟೇಲ, ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ ಕಣ್ಮನಿಗಳು ಬಣಜಿಗ ಸಮಾಜ ಬಾಂಧವರು ಎಂಬುದನ್ನು ನಾವಿಂದು ಮೆಲಕು ಹಾಕುವುದು ಅತ್ಯಂತ ಪ್ರಸ್ತುತ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಳೆದ ಮಾರ್ಚ ಮತ್ತು ಏಪ್ರೀಲ್ ಮಾಹೆಯಲ್ಲಿ ಜರುಗಿದ ಎಸ್.ಎಸ್.ಎಲ್. ಸಿ. ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಬಣಜಿಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಗೈದ ಸಮಾಜ ಬಾಂಧವರನ್ನು ಪುರಸ್ಕರಿಸಲಾಯಿತು.
ಬಣಜಿಗ ಸಮಾಜದ ಹಿರಿಯ ಮುಖಂಡ ಬಸವ್ವ ಬಸಪ್ಪ ಕೌಜಲಗಿ ಅವರು ಸಮಾರಂಭವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರೊ. ಚನ್ನಪ್ಪ ಕೌಜಲಗಿ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಚುನಮರಿ, ತಾಲ್ಲೂಕು ಸಲಹಾ ಸಮಿತಿ ಅಧ್ಯಕ್ಷ ವಿಶ್ವನಾಥ ಕಡಕೋಳ, ನಗರ ಘಟಕ ಅಧ್ಯಕ್ಷ ಪ್ರಶಾಂತ ಕುರಬೇಟ, ಯುವ ಘಟಕ ಅಧ್ಯಕ್ಷ ಲಖಮಗೌಡ ಪಾಟೀಲ, ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ, ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ, ಉದ್ಯಮಿಗಳಾದ ಚಂದ್ರಶೇಖರ ಕೊಣ್ಣೂರ, ವಿಕ್ರಮ ಅಂಗಡಿ, ಮಹಾಂತೇಶ ತಾಂವಶಿ, ಮಲ್ಲಿಕಾರ್ಜುನ ಈಟಿ, ಈಶ್ವರ ಕತ್ತಿ, ಡಾ. ಚಂದ್ರಶೇಖ ಗೂಗವಾಡ, ಹರ್ಷಿತಾ ಸವಣೂರ, ಶೋಭಾ ಕುರಬೇಟ ಉಪಸ್ಥಿತರಿದ್ದರು
