ಗೋಕಾಕ:ರಾಹುಲ್ ಟ್ರೋಫಿ – ಸೀಜನ್ -2 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು- ಬೆಳಕಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ

ರಾಹುಲ್ ಟ್ರೋಫಿ – ಸೀಜನ್ -2 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು- ಬೆಳಕಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಚಾಲನೆ
ಗೋಕಾಕ ಮೇ 6 : ರಾಹುಲ್ ಟ್ರೋಫಿ – ಸೀಜನ್ -2 ಜಿಲ್ಲಾ ಮತ್ತು ರಾಷ್ಟ್ರ ಮಟ್ಟದ ಹೊನಲು- ಬೆಳಕಿನ ಕ್ರಿಕೆಟ್ ಪಂದ್ಯಾವಳಿಗಳಿಗೆ ಬುಧವಾರದಂದು ನಗರದ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಹಶೀಲ್ದಾರ ಡಾ.ಮೋಹನ ಭಸ್ಮೆ ಅವರು ಚಾಲನೆ ನೀಡಿದರು.
ದಿನಾಂಕ 6 ರಿಂದ 9ರವರೆಗೆ ಜಿಲ್ಲಾ ಮಟ್ಟದ ಮಟ್ಟದ ಪಂದ್ಯಾವಳಿಗಳು ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಒಟ್ಟು 26 ತಂಡಗಳು ಭಾಗವಹಿಸಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನದ ರೂಪದಲ್ಲಿ 1 ಲಕ್ಷ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂಪದಲ್ಲಿ 50 ಸಾವಿರ ರೂ ನಗದು ಮತ್ತು ಆಕರ್ಷಕ ಟ್ರೋಫಿ ಪಡೆಯಲಿದ್ದಾರೆ.
ದಿನಾಂಕ 10 ರಿಂದ 14ರವರೆಗೆ ರಾಷ್ಟ್ರ ಮಟ್ಟದ ರಾಹುಲ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಳು ಜರುಗಲಿದ್ದು, ಈ ಪಂದ್ಯಾವಳಿಯಲ್ಲಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕೆರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು 16 ತಂಡಗಳು ಭಾಗವಹಿಸಲ್ಲಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನದ ರೂಪದಲ್ಲಿ 3 ಲಕ್ಷ ರೂ ನಗದು ,ಆಕರ್ಷಕ ಟ್ರೋಫಿ , ದ್ವಿತೀಯ ಬಹುಮಾನದ ರೂಪದಲ್ಲಿ 2 ಲಕ್ಷ ರೂ ನಗದು ಮತ್ತು ಆಕರ್ಷಕ ಟ್ರೋಫಿ ಪಡೆಯಲಿದ್ದಾರೆ. ಎರಡು ಪಂದ್ಯಾವಳಿಯಲ್ಲಿ ಪಂದ್ಯ ಪುರುಷ, ಪಂದ್ಯಶ್ರೇಷ್ಠ ಸೇರಿದಂತೆ ಅನೇಕ ವೈಯಕ್ತಿಕ ಬಹುಮಾನಗಳನ್ನು ಕೊಡಲಾಗುವುದು
ಈ ಸಂದರ್ಭದಲ್ಲಿ ಪಿಎಸ್ಐ ಕಿರಣ ಮೋಹಿತೆ, ಸಂಘಟಕ ರಿಯಾಜ ಚೌಗಲಾ, ಸಂತೋಷ ಭಟ್ಟ್, ಹನೀಫ ಶಾಬಾಶಖಾನ, ಮಂಜುನಾಥ್ ಗಂಗಣ್ಣವರ, ಜುಬೇರ ಮಿರ್ಜಾಬಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
