ಗೋಕಾಕ:ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮೂರು ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಿ : ಪತ್ರಕರ್ತ ಸಾದಿಕ

ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮೂರು ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಿ : ಪತ್ರಕರ್ತ ಸಾದಿಕ

ಗೋಕಾಕ ಎ 16 : ವಿದ್ಯಾರ್ಥಿಗಳು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಮೂರು ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಪತ್ರಕರ್ತ ಸಾದಿಕ ಹಲ್ಯಾಳ ಹೇಳಿದರು.
ಗುರುವಾರದಂದು ನಗರದ ಸತೀಶ್ ಶುಗರ್ಸ ಅಕಾಡೆಮಿ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜುನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಪ್ರಯುಕ್ತ ” ಮನೆ -ಮನೆಗೆ ಮನ ಮನಕ್ಕೆ ಬಾಬಾಸಾಹೇಬರು” ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ, ಮಹಾನ್ ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ ಮತ್ತು ದಲಿತರ ಹಕ್ಕಿಗಾಗಿ ಹೋರಾಡಿದ ನಾಯಕರಾಗಿದ್ದಾರೆ.
ಅವರ ಹಾಕಿಕೊಟ್ಟ ದಾರಿಯಲ್ಲಿ ಸಾಗಿ ನಾವು ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕಾಗಿದ್ದೆ. ವಿದ್ಯಾರ್ಥಿ ಜೀವನದಲ್ಲಿ ಬಾಬಾಸಾಹೇಬ ಅವರರಂತಹ ಮಹಾಮಾನವತಾವಾದಿ ಬಗ್ಗೆ ತಿಳಿದುಕೊಂಡು ಅವರ ತತ್ವ ಸಿದ್ದಾಂತಗಳನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಪಾಲಿಸಿಕೊಂಡು ಮುಂದೆ ಸಾಗಿದರೆ ಒಬ್ಬ ಒಳ್ಳೆಯ ಸಾಧಕರಾಗಲು ಸಾಧ್ಯ ಆ ದಿಸೆಯಲ್ಲಿ ಎಲ್ಲರೂ ವ್ಯಾಸಂಗ ಮಾಡಿ ಸಮ ಸಮಾಜವನ್ನು ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಶುಗರ್ಸ ಅಕಾಡೆಮಿ ಪದವಿ ಕಾಲೇಜಿನ ಪ್ರಾಚಾರ್ಯ ಬಿ.ಎಚ್.ಸ್ವಾಮಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿ.ಆರ್.ಲಕ್ಷೆಟ್ಟಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಡಾ.ಎಂ.ಆಯ್.ನದಾಫ್, ಎಸ್.ವಾಯ್.ಸಣ್ಣಾಯಿಕ, ಎಸ್.ಆರ್.ಭಜಂತ್ರಿ, ಜಿ.ಆರ್.ಗುಡ್ಡೊಡಗಿ, ಎಸ್.ಎಲ್.ಮನ್ನಿಕೇರಿ ಉಪಸ್ಥಿತರಿದ್ದರು.
