ಗೋಕಾಕ:ಅಮೆರಿಕಾದ ವಾಷಿಂಗ್ಟನ್ ಯುನಿವರ್ಸಿಟಿ ವತಿಯಿಂದ ಅಶೋಕ್ ಭಜಂತ್ರಿ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ

ಅಮೆರಿಕಾದ ವಾಷಿಂಗ್ಟನ್ ಯುನಿವರ್ಸಿಟಿ ವತಿಯಿಂದ ಅಶೋಕ್ ಭಜಂತ್ರಿ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ
ಗೋಕಾಕ ಎ 5 : ಸಾಮಾಜಿಕ ಕಾರ್ಯಕರ್ತ, ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಾಜ್ಯಾಧ್ಯಕ್ಷ ಅಶೋಕ ಭಜಂತ್ರಿ ಅವರಿಗೆ ಅಮೆರಿಕಾದ ವಾಷಿಂಗ್ಟನ್ ಯುನಿವರ್ಸಿಟಿಯ ವತಿಯಿಂದ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಗೋವಾ ರಾಜ್ಯದ ವಡಗಾಂವದ ಖಾಸಗಿ ಹೊಟೇಲ್ ದಲ್ಲಿ ಶನಿವಾರದಂದು ಜರುಗಿದ ಸಮಾರಂಭದಲ್ಲಿ ಅಶೋಕ ಭಜಂತ್ರಿ ಅವರಿಗೆ ಗೌವರ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಸನ್ಮಾನ : ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ರಾಜ್ಯಾಧ್ಯಕ್ಷ ಅಶೋಕ ಭಜಂತ್ರಿ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದ ಪ್ರಯುಕ್ತ ರವಿವಾರದಂದು ನಗರದಲ್ಲಿ ಅವರ ಗೆಳೆಯರ ಬಳಗದವರು ಅವರಿಗೆ ಸತ್ಕರಿಸಿ, ಗೌರವಿಸದರು.
ಈ ಸಂದರ್ಭದಲ್ಲಿ ಜೈನುಲ್ಲಾ ಅಂಕಲಗಿ,ಮಾನಿಂಗ ನೀಲನ್ನವರ, ಬಸವರಾಜ ಖಾನಪ್ಪನವರ, ಶಶಿ ಕನ್ನಪ್ಪಪನವರ, ಸಾದಿಕ ಹಲ್ಯಾಳ,ಶಿವಾನಂದ ಹಿರೇಕೂಡಿ, ರಾಜು ನಾಯಿಕ ಉಪಸ್ಥಿತರಿದ್ದರು.

