RNI NO. KARKAN/2006/27779|Saturday, October 5, 2024
You are here: Home » breaking news » ಗೋಕಾಕ:ದಿ. ಏಣಗಿ ಬಾಳಪ್ಪ ಅವರ 7 ದಶಕಗಳ ರಂಗಭೂಮಿ ಪಯಣ ಅವಿಸ್ಮರಣೀಯ : ಬಸವರಾಜ ಖಾನಪ್ಪನವರ

ಗೋಕಾಕ:ದಿ. ಏಣಗಿ ಬಾಳಪ್ಪ ಅವರ 7 ದಶಕಗಳ ರಂಗಭೂಮಿ ಪಯಣ ಅವಿಸ್ಮರಣೀಯ : ಬಸವರಾಜ ಖಾನಪ್ಪನವರ 

ದಿ. ಏಣಗಿ ಬಾಳಪ್ಪ ಅವರ 7 ದಶಕಗಳ ರಂಗಭೂಮಿ ಪಯಣ ಅವಿಸ್ಮರಣೀಯ : ಬಸವರಾಜ ಖಾನಪ್ಪನವರ
ಗೋಕಾಕ ಅ-18: ಲವ-ಕುಶ ನಾಟಕದಲ್ಲಿ ನಟಿಸುವುದರ ಮುಖಾಂತರ ರಂಗ ಭೂಮಿ ಪ್ರವೇಶ ಮಾಡಿದ ದಿ. ಏಣಗಿ ಬಾಳಪ್ಪ ಅವರು ಸುಮಾರು 7 ದಶಕಗಳ ರಂಗಭೂಮಿ ಪಯಣ ಅವಿಸ್ಮರಣೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಅವರು ಶುಕ್ರವಾರದಂದು ಸ್ಥಳೀಯ ಕ.ರ.ವೇ ಕಾರ್ಯಾಲಯದಲ್ಲಿ ಏರ್ಪಡಿಸಿದ ಶೃದ್ಧಾಂಜಲಿ ಸಭೆಯಲ್ಲಿ ಏಣಗಿ ಬಾಳಪ್ಪನವರಿಗೆ ಶೃಂದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಬಡ ಒಕ್ಕುಲತನ ಕುಟುಂಬದಿಂದ 1914ರಲ್ಲಿ ಜನಿಸಿದ ಬಾಳಪ್ಪನವರು ಚಿಕ್ಕೋಡಿ ಸಿದ್ಧಲಿಂಗ ಸ್ವಾಮಿಗಳ ಮಾರಿಕಾಂಬಾ ನಾಟಕ ಮಂಡಳಿ, ಅಂಬಿಗೇರ ನಾಟಕ ಕಂಪನಿ ಸೇರಿಕೊಂಡು ಅನೇಕ ಪಾತ್ರಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ನಟಿಸಿರುವ ನಾಟಕಗಳಲ್ಲಿ ಪಾದುಕಾ ಪಟ್ಟಾಭಿಷೇಕ, ಕಿತ್ತೂರು ರುದ್ರಮ್ಮಾ ನಾಟಕಗಳಲ್ಲಿ ಬಾಲಕ ಮತ್ತು ಸ್ತ್ರೀ ಪಾತ್ರದಲ್ಲಿ ನಟಿಸಿ ರಂಗಭೂಮಿ ಕಲಾವಿದರ ಪ್ರಶಂಸೆಗೆ ಪಾತ್ರವಾಗಿದ್ದರು.
ಸುಮಾರು 432ಕ್ಕೂ ಅಧಿಕ ನಾಟಕ ಮತ್ತು 123 ಅಧಿಕ ಕನ್ನಡ ಚಲನಚಿತ್ರಗಳಲ್ಲಿ ನಟನೆ ಮಾಡಿ, ನಾಡೋಜ ಸೇರಿದಂತೆ ಅನೇಕ ಪ್ರತಿಷ್ಟಿತ ಮುಡಗೇರಿಸಿಕೊಂಡು ಏಣಗಿ ಬಾಳಪ್ಪನವರು ಕರ್ನಾಟಕ ಕಂಡ ಅಪ್ರತಿಮ ಕಲಾವಿದರಾಗಿ ಹೊರಹೊಮ್ಮಿದ್ದರು. ಅವರ ಅಗಲಿಕೆಯಿಂದ ರಂಗಭೂಮಿ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ.ಭಗವಂತ ಅವರ ಆತ್ಮಕ್ಕೆ ಶಾಂತಿ ದಯಪಾಲಿಸಲೆಂದು ಬಸವರಾಜ ಖಾನಪ್ಪನವರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕ.ರ.ವೇ ಪದಾಧಿಕಾರಿಗಳಾದ ಸಾಧಿಕ ಹಲ್ಯಾಳ, ದೀಪಕ ಹಂಜಿ, ಕೃಷ್ಣಾ ಖಾನಪ್ಪನವರ, ಮಲ್ಲಪ್ಪ ತಲೆಪ್ಪಗೋಳ, ರಾಜು ಕೆಂಚನಗುಡ್ಡ, ರಾಮಸಿದ್ದ ಪೂಜೇರಿ, ಪ್ರತೀಕ ಪಾಟೀಲ, ಮಸ್ತಾನ ಚೌಧರಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು

Related posts: