RNI NO. KARKAN/2006/27779|Wednesday, March 25, 2026
You are here: Home » breaking news » ಗೋಕಾಕ:ನಾಳೆ ದಿ.26 ದಂದು ಶ್ರೀರಾಮನವಮಿ ನಿಮಿತ್ಯ ನಗರದಲ್ಲಿ ಬೃಹತ್ ಶೋಭಾಯಾತ್ರೆ

ಗೋಕಾಕ:ನಾಳೆ ದಿ.26 ದಂದು ಶ್ರೀರಾಮನವಮಿ ನಿಮಿತ್ಯ ನಗರದಲ್ಲಿ ಬೃಹತ್ ಶೋಭಾಯಾತ್ರೆ 

ನಾಳೆ ದಿ.26 ದಂದು ಶ್ರೀರಾಮನವಮಿ ನಿಮಿತ್ಯ ನಗರದಲ್ಲಿ ಬೃಹತ್ ಶೋಭಾಯಾತ್ರೆ
ಗೋಕಾಕ ಮಾ 25: ಇಲ್ಲಿನ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀ ರಾಮೋತ್ಸವ ಸಮಿತಿಯ ನೇತೃತ್ವದಲ್ಲಿ ಶ್ರೀರಾಮನವಮಿ ಹಾಗೂ ಶ್ರೀ ಹನುಮ ಜಯಂತಿ ಅಂಗವಾಗಿ ನಾಳೆ ಗುರುವಾರ ದಿನಾಂಕ 26 ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮೋತ್ಸವ ಸಮಿತಿ ಪ್ರಮುಖ ಹಾಗೂ ಹಿಂದೂ ಮುಖಂಡ ಸದಾಶಿವ ಗುದಗಗೋಳ ತಿಳಿಸಿದರು.

ಬುಧವಾರದಂದು ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೋಭಾಯಾತ್ರೆಯು ಗುರುವಾರ ಸಾಯಂಕಾಲ 4 ಘಂಟೆಗೆ ನಗರದ ಶ್ರೀ ಕೊಳವಿ ಹಣಮಂತ ದೇವಸ್ಥಾನ ಪ್ರಾರಂಭವಾಗಿ ಸಂಗೋಳ್ಳಿ ರಾಯಣ್ಣ ವೃತ್ತದ ಮುಕ್ತಾಯಗೊಳ್ಳಲ್ಲಿದ್ದು, ಶೋಭಾಯಾತ್ರೆಗೆ ನಗರದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿವಿಧ ಶ್ರೀಗಳು ಚಾಲನೆ ನೀಡಲಿದ್ದಾರೆ.
ಶೋಭಾಯಾತ್ರೆ ಮಾರ್ಗ ಮಧ್ಯೆ ಸಮಿತಿ ವತಿಯಿಂದ ಅಲ್ಲಲ್ಲಿ ಪ್ರಸಾದ ಹಾಗೂ ಅಲ್ಪೋಹಾರ ವ್ಯವಸ್ಥೆ ಮಾಡಲಾಗಿದ್ದು, ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್‌ಗೆ ಅವಕಾಶ ನೀಡದೇ ದೇಶದ ಹೆಸರಾಂತ್ಯ ವಿವಿಧ 13 ಜಾನಪದ ಕಲಾ ತಂಡಗಳು ಹಾಗೂ ಹಲವಾರು ರೂಪಕಗಳು ಭಾಗವಹಿಸಲಿವೆ. ಶಾಲಾ ವಿದ್ಯಾರ್ಥಿಗಳು, ಚಿಕ್ಕ ಮಕ್ಕಳು ಶ್ರೀರಾಮ, ಹನುಮಂತ ಸೇರಿದಂತೆ ವಿವಿಧ ಮಹಾ ಪುರುಷರ ವೇಷಭೂಷಣದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶ್ವಸಿಗೊಳ್ಳಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಈ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಶೋಭಾಯಾತ್ರೆಯನ್ನು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ವಿಧಿ ಪ್ರಕೋಷ್ಟ, ಜಿಲ್ಲಾ ಪ್ರಮುಖ ಹಾಗೂ ನ್ಯಾಯವಾದಿ ಬಲದೇವ ಸಣ್ಣಕ್ಕಿ, ನ್ಯಾಯವಾದಿ ವಿಠ್ಠಲ ಡಬ್ಬನವರ ಇದ್ದರು.

Related posts: