RNI NO. KARKAN/2006/27779|Wednesday, February 25, 2026
You are here: Home » breaking news » ಗೋಕಾಕ:ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು,ಏಜೆಂಟರ ಹಾವಳಿ ತಡೆಯುವಂತೆ ಕರವೇ ಧರಣಿ

ಗೋಕಾಕ:ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು,ಏಜೆಂಟರ ಹಾವಳಿ ತಡೆಯುವಂತೆ ಕರವೇ ಧರಣಿ 

ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು,ಏಜೆಂಟರ ಹಾವಳಿ ತಡೆಯುವಂತೆ ಕರವೇ ಧರಣಿ


ಗೋಕಾಕ ಫೆ 25 : ಹಿರಿಯ ಮೋಟಾರ ವಾಹನ ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು, ಇಲಾಖೆಯಲ್ಲಿ ಮಧ್ಯವರ್ತಿಗಳ (ಏಜೆಂಟರ) ಹಾವಳಿ ತಡೆಯುವಂತೆ ಆಗ್ರಹಿಸಿ ಬುಧವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಎ.ಆರ್‌.ಟಿ‌.ಓ ಕಛೇರಿಯ ಎದುರು ಧರಣಿ ಸತ್ಯಾಗ್ರಹ ನಡೆಸಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುಖಾಂತರ ಜಂಟಿ ಸಾರಿಗೆ ಆಯುಕ್ತರಿಗೆ ಮನವಿ ಅರ್ಪಿಸಿದರು.
ಸಹಾಯಕ ಪ್ರಾದೇಶಿಕ ಸಾರಿಗೆ (ಎ.ಆರ್.ಟಿ.ಓ) ಕಛೇರಿಯಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ದಿಸೆಯಲ್ಲಿ ಇಲಾಖೆ ಸಾರ್ವಜನಿಕ ಸೇವೆಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗೋಕಾಕ ಎ.ಆರ್‌.ಟಿ.ಓ ನಲ್ಲಿ ಅಂದಾಜು 60ಕ್ಕೂ ಅಧಿಕ ಏಜೆಂಟರಿದ್ದಾರೆ. ವಾಹನ ನೋಂದಣಿ, ಎಲ್‌ಎಲ್‌ಆರ್‌, ಡಿಎಲ್‌ ಪಡೆಯಲು, ಇತರೆ ಸೇವೆಗಳಿಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಆದರೆ ಅರ್ಜಿಗೆ ಒಕೆ ಬಟನ್‌ ಒತ್ತುವುದು ಮಾತ್ರ ಮಧ್ಯವರ್ತಿಗಳು. ಬಹುತೇಕ ಪದವಿಧರರು ಆನ್‌ಲೈನ್‌ನಲ್ಲಿ ಅರ್ಜಿ ತುಂಬಲು ಮಧ್ಯವರ್ತಿಗಳನ್ನೇ ಆಶ್ರಯಿಸಿದ್ದಾರೆ. ಹೀಗಾಗಿ ಲಾಭದಾಯಕವಾಗಿರುವ ಈ ಕೆಲಸಕ್ಕೆ ನಾಯಿಕೊಡೆಗಳಂತೆ ದಿನದಿಂದ ದಿನಕ್ಕೆ ಮಧ್ಯವರ್ತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಸಾರಥಿ, ವಾಹನ್‌ ತಂತ್ರಾಂಶ ಎಆರ್‌ಟಿಓ ಇಲಾಖೆ ಸಾರ್ವಜನಿಕ ಸೇವೆಯನ್ನು ಸರಳವಾಗಿಸುವ ನಿಟ್ಟಿನಲ್ಲಿ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಗೆ ‘ಸಾರಥಿ’, ‘ವಾಹನ್‌’ ಎಂಬ ವಿನೂತನ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿದೆ. ಈ ಮೂಲಕ ಸಾರ್ವಜನಿಕರು ನೇರವಾಗಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ, ಎಲ್‌ಎಲ್‌ಆರ್‌, ಡಿಎಲ್‌ ಮತ್ತಿತರೆ ಸೇವೆ ಪಡೆಯಬಹುದಾಗಿದೆ. ಆದರೂ ಮಧ್ಯವರ್ತಿಗಳು ನೇರವಾಗಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಣ ಮಾಡುತ್ತಿದ್ದು, ಇಲಾಖೆಯ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಎ.ಆರ್.ಟಿ‌.ಓ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯವರ್ತಿಗಳು ಕಛೇರಿಯ ಒಳಗೆ ಬರದಂತೆ ಮತ್ತು ಕಛೇರಿಯ ಅಕ್ಕ-ಪಕ್ಕ ಶೆಡಗಳನ್ನು ತೆರೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮಧ್ಯವರ್ತಿಗಳ ಹಾವಳಿಯನ್ನು ತಡೆಯಬೇಕು ಹಾಗೂ
ಹಿರಿಯ ಮೋಟಾರ ವಾಹನ ನಿರೀಕ್ಷಕರು ಈ ಕಛೇರಿಗೆ ಬಂದಾಗಿನಿಂದ ಭ್ರಷ್ಟಾಚಾರ ಜೋರಾಗಿ ನಡೆದಿದೆ. ಆರ್.ಆರ್.ಸಿ ಮತ್ತು ಎಫ್.ಸಿ . ಡಿ.ಎಲ್.
ವಾಹನಗಳ ದಾಖಲೆಗಳು ಎಲ್ಲಾ ಸರಿಯಾಗಿ ಇದ್ದರು ಅವರಿಂದ ಡಿ.ಎಲ್, ದ್ವಿಚಕ್ರ ವಾಹನ , ನಾಲ್ಕು ಚಕ್ರ ವಾಹನಗಳಿಗೆ 850 ರೂ. ಹೆವಿ ಬ್ಯಾಚ್ ಲೈಸೆನ್ಸ್ ಮಾಡಲು 2000 ರೂ ಇದು ಕಛೇರಿಯಲ್ಲಿ ಆದರೆ ಹೊರಗೆಡೆ ವಾಹನ ತಪಾಸಣೆ ಹೋದಾಗ ವಾಹನ ಸವಾರರ ದಾಖಲಾತಿಗಳು ಸರಿಯಾಗಿದ್ದರು ಅವರಿಂದ ಹಣ ಪಡೆದು ವಾಹನಗಳನ್ನು ಬಿಡುತ್ತಾರೆ. ಮಧ್ಯರಾತ್ರಿ 2 ರಿಂದ ಮುಂಜಾನೆ 6 ಘಂಟೆಯವರೆಗೆ ವಾಹನ ತಪಾಸಣೆ ಮಾಡಿ ಅಧಿಕೃತವಾಗಿ ಒಂದೆರೆಡು ವಾಹನಗಳಿಗೆ ದಂಡ ವಿಧಿಸಿ ಉಳಿದ ವಾಹನ ಸವಾರರಿಂದ ಬಾಯಿಗೆ ಬಂದಷ್ಟು ಬೇಡಿಕೆ ಇಟ್ಟು ಅವರಿಂದ ಹಣ ವಸೂಲಿ ಮಾಡುತ್ತಾರೆ. ಮರುದಿನ 12 ಘಂಟೆಯ ನಂತರ ಕಛೇರಿಗೆ ಬರುತ್ತಾರೆ ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಮೋಟರ ವಾಹನ ನಿರುಕ್ಷಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಕಛೇರಿಯಿಂದ ಬೇರೆಕಡೆ ವರ್ಗಾವಣೆ ಮಾಡಬೇಕು ಎಂದು ಕರವೇ ವತಿಯಿಂದ ತಮ್ಮಲ್ಲಿ ವಿನಂತಿಸುತ್ತೇವೆ. ಇದಕ್ಕೆ ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಜಂಟಿ ಆಯುಕ್ತರ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂಧರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಜಿಲ್ಲಾ ಮಾಧ್ಯಮ ವಕ್ತಾರ ಸಾದಿಕ ಹಲ್ಯಾಳ, ಕರವೇ ತಾಲೂಕು ಪದಾಧಿಕಾರಿಗಳಾದ ದೀಪಕ ಹಂಜಿ, ಹನಿಫಸಾಬ ಸನದಿ, ನಿಜಾಮ ನಧಾಫ, ಮಲ್ಲು ಸಂಪಗಾರ, ಅಶೋಕ ಗಾಡಿವಡ್ಡರ, ಕಲ್ಲೋಳೆಪ್ಪ ಗಾಡಿವಡ್ಡರ, ರಮೇಶ ಕಮತಿ, ವಿವಿಧ ಗ್ರಾಮ ಘಟಕಗಳ ಅಧ್ಯಕ್ಷರುಗಳಾದ ಮಹಾದೇವ ಮಕ್ಕಳಗೇರಿ, ಬಸವರಾಜ ಗಾಡಿವಡ್ಡರ, ಹನುಮಂತ ಕಮತಿ,ವಜ್ರಕಾಂತ ಜೋತಾವರ, ಮಲ್ಲಕ ಸನದಿ, ದುಂಡಪ್ಪ ಪಾಟೀಲ, ನಾಗರಾಜ ನಾಯಿಕ, ಶಿವಾನಂದ ಲಿಂಬೆನ್ನವರ, ದುರ್ಗಪ್ಪ ಬಂಡಿವಡ್ಡರ, ಹನುಮಂತ ಬನಾಜ, ಗಣಪತಿ ಜಾಗನೂರ, ಕೆಂಪಣ್ಣ ಕಡಕೋಳ,ಆನಂದ ಖಾನಪ್ಪನವರ ಉಪಸ್ಥಿತರಿದ್ದರು.

Related posts: