ಗೋಕಾಕ:ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ನೂತನ ಗೇಟ್ ಹಾಗೂ ನಾಮಫಲಕ ಕೊಡುಗೆ
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ನೂತನ ಗೇಟ್ ಹಾಗೂ ನಾಮಫಲಕ ಕೊಡುಗೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 18 :
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಹಳೆಯ ವಿದ್ಯಾರ್ಥಿಗಳ ದೇಣಿಗೆ ಹಣದಿಂದ ಸುಮಾರು 55 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಶಾಲೆಯ ಆವರಣದ ಮಹಾದ್ವಾರಕ್ಕೆ ನೂತನ ಗೇಟ್ ಹಾಗೂ ನಾಮಫಲಕವನ್ನು ಇತ್ತೀಚಿಗೆ ನಿರ್ಮಿಸಲಾಗಿದೆ.
ಉಭಯ ಶಾಲೆಯ ಮುಖ್ಯೋಪಾಧ್ಯಯರಾದ ವೈ.ಸಿ.ಶೀಗಿಹಳ್ಳಿ, ಆರ್.ಬಿ.ಬೆಟಗೇರಿ ಮತ್ತು ಶಿಕ್ಷಕರು, ಎಸ್‍ಡಿಎಮ್‍ಸಿ ಅಧ್ಯಕ್ಷರಾದ ರಾಮಣ್ಣ ನೀಲಣ್ಣವರ, ಉದ್ದಪ್ಪ ಚಂದರಗಿ, ಸದಸ್ಯರು, ಶಿಕ್ಷಣಪ್ರೇಮಿಗಳು ಸ್ಥಳೀಯ ಉಭಯ ಪ್ರಾಥಮಿಕ ಶಾಲೆಯ ಮಹಾದ್ವಾರಕ್ಕೆ ನೂತನ ಗೇಟ್ ಹಾಗೂ ನಾಮಫಲಕ ನಿರ್ಮಿಸಲು ಸಹಾಯ, ಸಹಕಾರ ನೀಡಿದ ಶಾಲೆಯ ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶ್ಲಾಘಿಸಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಯರಾದ ವೈ.ಸಿ.ಶೀಗಿಹಳ್ಳಿ, ಆರ್.ಬಿ.ಬೆಟಗೇರಿ ಮತ್ತು ಶಿಕ್ಷಕರು, ಎಸ್‍ಡಿಎಮ್‍ಸಿ ಅಧ್ಯಕ್ಷರಾದ ರಾಮಣ್ಣ ನೀಲಣ್ಣವರ, ಉದ್ದಪ್ಪ ಚಂದರಗಿ, ಸದಸ್ಯರು, ಶಿಕ್ಷಣಪ್ರೇಮಿಗಳು, ಮತ್ತೀತರರು ಇದ್ದರು.