ಗೋಕಾಕ:ಫೆಬ್ರವರಿ 1 ರಿಂದ 3 ರವರೆಗೆ 21ನೇ ಶರಣ ಸಂಸ್ಕೃತಿ ಉತ್ಸವ : ಶಂಕರ ಗೋರೋಶಿ ಮಾಹಿತಿ

ಫೆಬ್ರವರಿ 1 ರಿಂದ 3 ರವರೆಗೆ 21ನೇ ಶರಣ ಸಂಸ್ಕೃತಿ ಉತ್ಸವ : ಶಂಕರ ಗೋರೋಶಿ ಮಾಹಿತಿ
ಗೋಕಾಕ ಜ 29 : 21ನೇ ಶರಣ ಸಂಸ್ಕೃತಿ ಉತ್ಸವ ಫೆಬ್ರವರಿ 1 ರಿಂದ 3 ರವರೆಗೆ ನಗರದ ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಜರುಗಲಿದ್ದು, ಫೆಬ್ರವರಿ 2 ರಂದು ಜರಗುವ ಮಹಿಳಾ ಸಮಾವೇಶದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುನಿತಾ ಕೃಷ್ಣನ ಅವರಿಗೆ ಕಾಯಕಶ್ರೀ ಪ್ರಶಸ್ತಿ ಜೊತೆಗೆ 1 ಲಕ್ಷ ರೂ ನಗದು ನೀಡಿ ಗೌರವಿಸಲಾಗುವುದು ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಶಂಕರ ಗೋರೋಶಿ ಹೇಳಿದರು.
ಗುರುವಾರದಂದು ನಗರದ ಶ್ರೀ ಶೂನ್ಯ ಸಂಪಾದನ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಫೆಬ್ರವರಿ 1 ರವಿವಾರದಂದು ಮುಂಜಾನೆ 8 ಘಂಟೆಗೆ ನಗರದ ಶಾಲಾ ವಿದ್ಯಾರ್ಥಿಗಳಿಂದ ಅರಿವು, ಅಕ್ಷರ, ಆರೋಗ್ಯ ಕಲ್ನಾಡಿಗೆ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುವುದು. ಬೆಳಿಗ್ಗೆ 8:30ಕ್ಕೆ ಷಟಸ್ಥಲ ಧ್ವಜಾರೋಹಣ ಜರುಗುವದು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಮಖಂಡಿ ಓಲೆಮಠದ ಪರಮ ಪೂಜ್ಯ ಆನಂದ ದೇವರು ವಹಿಸುವರು. ಧ್ವಜಾರೋಹಣವನ್ನು ಶಾಸಕ ಶರಣಶ್ರೀ ರಮೇಶ್ ಜಾರಕಿಹೊಳಿ ನೆರವೇರಿಸುವರು. ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ, ಚಂದ್ರಪ್ಪಾ ಘಿವಾರಿ ಉಪಸ್ಥಿತರಿರುವರು.
ಸಾಯಂಕಾಲ 6 ಘಂಟೆಗೆ ಯುವಜನೋತ್ಸವ ಮತ್ತು ಸಂಗೀತ ಸಮಾವೇಶ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಮತಗಿಯ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು ವಹಿಸುವರು. ಕಾರ್ಯವನ್ನು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಶಿವಪ್ರಕಾಶ್ ಬಡ್ಡಿ, ಸಂತೋಷ ಕಾಮಗೌಡರ, ಮಹೇಶ ಮಾಸಾಳ, ಭರಮಣ್ಣ ಉಪ್ಪಾರ, ಡಾ.ಶಿವಾನಂದ ಮಗದುಮ್ಮ, ಅಶೋಕ ಕಮತ, ಸುಭಾಷಚಂದ್ರ ಬಿ.ಪಾಟೀಲ ಸೇರಿದಂತೆ ಅನೇಕ ಗಣ್ಯರು ಬಾಗವಹಿಸುವರು.
ಸೋಮವಾರ ದಿನಾಂಕ 2 ರಂದು ಸಾಯಂಕಾಲ 6 ಘಂಟೆಗೆ ಮಹಿಳಾ ಸಮಾವೇಶ ಜರುಗಲಿದ್ದು, ಈ ಸಮಾವೇಶದ ದಿವ್ಯ ಸಾನ್ನಿಧ್ಯವನ್ನು ಕೂಡಲ ಸಂಗಮ ಬಸವ ಧರ್ಮ ಪೀಠದ ಪೂಜ್ಯ ಶ್ರೀ ಜಗದ್ಗುರು ಗಂಗಾಮಾತಾಜಿ, ಬಸವಬೆಳವಿಯ ಶರಣಬಸವ ಸ್ವಾಮೀಜಿ ವಹಿಸುವರು.
ಕಾರ್ಯಕ್ರಮವನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಮ್.ಜಾನಕಿ ವಹಿಸುವರು. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡದ ಮೇಯರ್ ಜ್ಯೋತಿ ಪಾಟೀಲ್, ಮಯೂರ ಶಿವಾಳಕರ, ರೂಪಾ ಮುನವಳ್ಳಿ, ವಿಜಯಲಕ್ಷ್ಮಿ ಸಿದ್ದಾಪೂರಮಠ, ನಿವೇದಿತಾ ಸಿದ್ನಾಳ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಸುನಿತಾ ಕೃಷ್ಣನ ಅವರಿಗೆ ” ಕಾಯಕಶ್ರೀ” ಪ್ರಶಸ್ತಿಯ ಜೊತೆಗೆ ನಗದು 1 ಲಕ್ಷರೂ ಗಳನ್ನು ನೀಡಿ ಗೌರವೌಸಲಾಗುವುದು. ನಂತರ ಖ್ಯಾತ ಉದಯ ಜಾದೂಗರ ಅವರು ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 3 ಮಂಗಳವಾರದಂದು ಮುಂಜಾನೆ ಶ್ರೀಮಠದ ಕರ್ತೃ ಗದುಗೆಗೆ ಬಿಲ್ವಾರ್ಚಣೆ ಮುತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವವು ಜರುಗುವದು.
ಪ್ರತಿದಿನದ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು. ಪ್ರತಿದಿನ ಸಂಜೆ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶರಣರಿಗೆ ಗೌರವ ಸನ್ಮಾನ ನೆರವೇರುವುದು. ಸಾರ್ವಜನಿಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಉತ್ಸವ ಸಮಿತಿ ಅಧ್ಯಕ್ಷ ಶಂಕರ ಗೋರೋಶಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಶರಣ ಸಂಸ್ಕೃತಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವಂತಪ್ಪ ಉಳ್ಳಾಗಡ್ಡಿ, ಶ್ರೀಮತಿ ಸೇವಂತಾ ಮುಚ್ಚಂಡಿಹಿರೇಮಠ, ಡಾ.ಸಿ.ಕೆ.ನಾವಲಗಿ ಉಪಸ್ಥಿತರಿದ್ದರು.
