ಗೋಕಾಕ:ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ ಮಾಡುವಂತೆ ಆಗ್ರಹಿಸಿ ಮನವಿ

ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ ಮಾಡುವಂತೆ ಆಗ್ರಹಿಸಿ ಮನವಿ
ಗೋಕಾಕ ಮೇ 31 : ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ ಮಾಡುವಂತೆ ಕೋರಿ ತಹಶೀಲದಾರ ಮುಖಾಂತರ ಸರಕಾರಕ್ಕೆ ಶನಿವಾರದಂದು ಇಲ್ಲಿಯ ಕರ್ನಾಟಕ ರಾಜ್ಯ ನೀರು ಸರಬರಾಜು ಹೊರ ಗುತ್ತೀಗೆ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ನೀರು ಸರಬರಾಜು ನೌಕರರನ್ನು ಕಳೆದ 20-25ವರ್ಷಗಳಿಂದ ಹೊರ ಗುತ್ತೀಗೆ ಅಡಿಯಲ್ಲಿ ದುಡಿಸಿಕೊಳ್ಳುತ್ತಿದ್ದು ಯಾವುದೇ ರೀತಿಯ ಸೇವಾ ಭದ್ರತೆ ದೊರೆತಿರುವದಿಲ್ಲ. ಇದರಿಂದ ನಮ್ಮ ಕುಟುಂಬಗಳು ಬೀದಿ ಪಾಲಾಗುವ ದುಸ್ಥಿತಿಯಲ್ಲಿವೆ. ನಿತ್ಯ ಜೀವನದ ಅತಿ ಮುಖ್ಯವಾಗಿ ಅವಶ್ಯಕವಾಗಿರುವಂತಹ ನೀರು ಸರಬರಾಜು ಸೇವೆಯನ್ನು ನಿರಂತರ ಮಾಡಿಕೊಂಡು ಬರುತ್ತಿರುವ ನೌಕರರನ್ನು ಈ ತಿಂಗಳ ಒಳಗಾಗಿ ನೇರ ನೇಮಕಾತಿ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ತಿಂಗಳು ರಾಜ್ಯದಾಧ್ಯಂತ ನೀರು ಸರಬರಾಜು ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳುವದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಯೇಶ ತಾಂಬೊಳೆ, ಆನಂದ ಕಪರಟ್ಟಿ, ಶೆಟ್ಟೆಪ್ಪ ಕಳ್ಳಿಮನಿ, ಸತೀಸ ಮಾಸ್ತಮರಡಿ, ಉಮಾಜಿ ಬೆಳಗಾಂವಕರ, ಶ್ರೀಕಾಂತ ಕಳ್ಳಿಮನಿ, ಅರುಣ ಮಾದರ, ಪ್ರಶಾಂತ ಕೊಣ್ಣೂರ, ಕಾಡೇಶ ಹೂಲಿಕಟ್ಟಿ, ಪರಶುರಾಮ ಪ್ರಭುಗೋಳ, ಮಾರುತಿ ಪ್ರಭುಗೋಳ, ಲಕ್ಷ್ಮೀಕಾಂತ ಹಿರಗನ್ನವರ, ಜಗದೀಶ ತಳಗಿನಮನಿ, ಮಾರುತಿ ಪೂಜೇರಿ, ಯಲ್ಲಪ್ಪ ಆನೆಗೌಡರ ಇದ್ದರು.