RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಯುವಕರು ಸಂಘಟಿತರಾಗಿ ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು: ಅಬ್ಬಾಸ ದೇಸಾಯಿ ಕರೆ

ಗೋಕಾಕ:ಯುವಕರು ಸಂಘಟಿತರಾಗಿ ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು: ಅಬ್ಬಾಸ ದೇಸಾಯಿ ಕರೆ 

ಯುವಕರು ಸಂಘಟಿತರಾಗಿ ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು: ಅಬ್ಬಾಸ ದೇಸಾಯಿ ಕರೆ

ಗೋಕಾಕ ಫೆ 5 : ಯುವಕರು ದುಶ್ಚಟಗಳಿಂದ ದೂರವಿದ್ದು ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ನಗರಸಭೆಯ ಮಾಜಿ ಉಪಾಧ್ಯಕ್ಷ ಅಬ್ಬಾಸ ದೇಸಾಯಿ ಕರೆ ನೀಡಿದರು.
ಅವರು ಇತ್ತೀಚಿಗೆ ಇಲ್ಲಿಯ ಈದ್ಗಾ ಮೊಹಲ್ಲಾದಲ್ಲಿ ಜಯ ಕರ್ನಾಟಕ ಸಂಘಟನೆಯ ಗೋಕಾಕ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಯುವಕರು ಸಂಘಟಿತರಾಗಿ ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಮಾಜದ ಅಭಿವೃದ್ದಿಗಾಗಿ ದುಡಿಯಬೇಕು. ಕನ್ನಡ ನೆಲ,ಜಲ,ಭಾಷೆಯ ಉಳಿವಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಕಮೀಟಿ ಕಾರ್ಯದರ್ಶಿ ಜುಬೇರಾ ತ್ರಾಸಗಾರ, ಮುಸ್ತಾಕ ಖಂಡಾಯತ , ಸಂಘದ ಜಿಲ್ಲಾ ಉಪಾಧ್ಯಕ್ಷ ಮಲೀಕಜಾನ ತಲವಾರ, ತಾಲೂಕಾಧ್ಯಕ್ಷ ಹೈದರ ಅಲಿ ಮುಲ್ಲಾ, ನಗರ ಘಟಕ ಅಧ್ಯಕ್ಷ ಬಾಬುಸಾಬ ನಧಾಪ, ಅಜೀಜ ಮೋಕಾಶಿ, ಮೌಲಾ ಪುಲತಾಂಬೆ, ಮೋಶೀನ ಪೈಲವಾನ, ಯಾಸೀನ ಚಾಂದಖಾನ, ಮುತ್ತುರಾಜ ದುಂಡುಗೋಳ, ಖಾದರರಾಜೇಖಾನ, ಮಲೀಕಸಾಬ ಅರಳಿಮಟ್ಟಿ, ದಾದಾಪೀರ ಪೀರಜಾದೆ ಸೇರಿದಂತೆ ಇತರರು ಇದ್ದರು.

Related posts: