RNI NO. KARKAN/2006/27779|Monday, February 2, 2026
You are here: Home » breaking news » ಅಥಣಿ : ಸರಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೋರತೆ : ಪರದಾಡುತ್ತಿರುವ ರೋಗಿಗಳು

ಅಥಣಿ : ಸರಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೋರತೆ : ಪರದಾಡುತ್ತಿರುವ ರೋಗಿಗಳು 

ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೋರತೆ : ಪರದಾಡುತ್ತಿರುವ ರೋಗಿಗಳು

ಅಥಣಿ ಜು 31: ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕರೆದು ಕೊಂಡು ಹೋಗಲು ಸ್ಟ್ರೆಚರ ಇಲ್ಲದೆ ತೀವ್ರ ಅಸ್ವಸ್ಥಗೊಂಡ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಕುರಿತು ವಿಡಿಯೋ ಒಂದು ವೈರಲ್ ಆಗಿದೆ
ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡಿದ್ದ ರಮೇಶ ಎಂಬಾತನನ್ನು ಸ್ಟ್ರೆಚರ್ ಇಲ್ಲದ್ದರಿಂದ ನಾಲ್ಕು ಜನ ಜನರು ಸೇರಿಕೊಂಡು ಕೈ ಮತ್ತು ಕಾಲು ಹಿಡಿದುಕೊಂಡು ಹೊತ್ತು ತಂದು ಆಸ್ಪತ್ರೆಯಲ್ಲಿ ದಾಖಲು ಮಾಡುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗಿವೆ. 

ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಅಲ್ಲದೇ, ವೈದ್ಯರ ಬದಲಾಗಿ ನರ್ಸ್‌ಗಳೇ ಎಲ್ಲಾ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುವುದು ಇಲ್ಲಿಯ ರೋಗಿಗಳ ಹಾಗೂ ರೋಗಿಗಳ ಸಂಬಂಧಿಕರ ಆರೋಪವಾಗಿದೆ. ಹೀಗಾಗಿ, ತಾಲೂಕು ಆಸ್ಪತ್ರೆಯಲ್ಲಿ ಮಾನವೀಯತೆ ಎಂಬುವುದು ಇಲ್ಲದಂತಾಗಿದೆ. ಕೂಡಲೇ ಆರೋಗ್ಯ ಇಲಾಖೆ ಆಸ್ಪತ್ರೆಗೆ ಹಿಡಿದಿರುವ ರೋಗಕ್ಕೆ ಚಿಕಿತ್ಸೆ ಕೊಡಬೇಕಿದೆ ಎಂಬುವುದು ಸ್ಥಳೀಯರ ಬೇಡಿಕೆಯಾಗಿದೆ

Related posts: