RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಪೌರನೌಕರರ ಮುಷ್ಕರಕ್ಕೆ ಕರವೇ ಬೆಂಬಲ

ಗೋಕಾಕ:ಪೌರನೌಕರರ ಮುಷ್ಕರಕ್ಕೆ ಕರವೇ ಬೆಂಬಲ 

ಪೌರನೌಕರರ ಮುಷ್ಕರಕ್ಕೆ ಕರವೇ ಬೆಂಬಲ

ಗೋಕಾಕ ಮೇ 31 : ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ನೇತೃತ್ವದಲ್ಲಿ ಪೌರ ನೌಕರರು ಸ್ಥಳೀಯ ನಗರಸಭೆ ಕಚೇರಿ ಎದುರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಇವರ ಈ ಹೋರಾಟಕ್ಕೆ ಶನಿವಾರದಂದು ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ, ಕರ್ನಾಟಕ ದಲಿತ ಪ್ಯಾಂಥರ್ಸ ಸಂಘಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ.ಎನ್.ಮೂರ್ತಿ ಬಣದ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸವಲತ್ತುಗಳನ್ನು ಪೌರಸೇವಾ ನೌಕರರಿಗೆ ಪ್ರತ್ಯೇಕ ಆದೇಶವಿಲ್ಲದೆ ವಿಸ್ತರಿಸುವುದು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ/ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸಕ್ರಮಾತಿಗೊಳಿಸುವುದು, ನಗರಸಭೆಗಳಲ್ಲಿ 100% ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ನೇಮಕಾತಿ ಮಾಡುವುದು, 2022 ನೇ ಸಾಲಿನ ವಿಶೇಷ ನೇಮಕಾತಿ ಅಡಿ ಆಯ್ಕೆಯಾದ ಪೌರಕಾರ್ಮಿರು/ಲೋಡರಗಳಿಗೆ ಎಸ್.ಎಫ್.ಸಿ ವೇತನ ನಿಧಿಯಿಂದ ವೇತನ ಪಾವತಿಸುವುದು, ನಗರ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿ ಅಡಿ ಪರಿಗಣಿಸುವುದು ಸೇರಿದಂತೆ ಇತರ ಪೌರನೌಕರರ ಬೇಡಿಕೆಗಳನ್ನು ಸರಕಾರ ಕೂಡಲೇ ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು

ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ, ರಾಜೇಂದ್ರ ಕೆಂಚನಗುಡ್ಡ, ಶಂಕರ ಹೂಲಿಕಟ್ಟಿ , ಸತಾರ ಬೇಪಾರಿ, ಶಿವಾನಂದ ನಿಂಗನ್ನವರ, ಹನಿಫಸಾಬ ಸನದಿ, ರಮೇಶ ಹರಿಜನ , ಶಿವಾನಂದ ಮಾದರ, ಮಹಾದೇವ ಮಕ್ಕಳಗೇರಿ, ಶಂಕರ ಮೇಗಡಿ, ಮಂಜು ಗಟ್ಟನಟ್ಟಿ, ಸಂಜು ಹೊಸಮನಿ, ರಾಹುಲ್ ಪಾಟೀಲ, ರವಿ ಕಡಕೋಳ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಗೋಕಾಕ ಶಾಖಾ ಅಧ್ಯಕ್ಷ ಜಯೇಶ್ ತಾಂಬೋಳೆ, ಉಪಾಧ್ಯಕ್ಷ ವಿಠಲ್ ಹಿರಗನ್ನವರ, ರಾಜ್ಯ ಸಂಘಟನೆಯ ಪದಾಧಿಕಾರಿ ಸಿದ್ದಪ್ಪ ಬನಕಾರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ ಗಜಾಕೋಶ, ಪೌರಕಾರ್ಮಿಕರು ನೀರು ಸರಬರಾಜು ಮಾಡುವ ಎಲ್ಲ ವಾಲ್ಮನ್ ಗಳು ಹಾಗೂ ಕಾರ್ಮಿಕರು ನಗರಸಭೆಯ ಎಲ್ಲ ವಾಹನ ಚಾಲಕರು ಉಪಸ್ಥಿತರಿದ್ದರು.

Related posts: