ಗೋಕಾಕ:ವಿಜ್ಞಾನಿಗಳು, ವಿಧ್ವಾಂಸರು ಸಾಧಕರುಗಳಿಂದ ನಮ್ಮ ದೇಶ ಶ್ರೇಷ್ಠವಾಗಿದೆ ಅವರ ಪ್ರೇರಣೆಯಿಂದ ಸಾಧಕರಾಗಿ : ಸಿದ್ದಾರ್ಥ ಮುತಕೆಕರ

ವಿಜ್ಞಾನಿಗಳು, ವಿಧ್ವಾಂಸರು ಸಾಧಕರುಗಳಿಂದ ನಮ್ಮ ದೇಶ ಶ್ರೇಷ್ಠವಾಗಿದೆ ಅವರ ಪ್ರೇರಣೆಯಿಂದ ಸಾಧಕರಾಗಿ : ಸಿದ್ದಾರ್ಥ ಮುತಕೆಕರ
ಗೋಕಾಕ ಮೇ 10 : ವಿಜ್ಞಾನಿಗಳು, ವಿಧ್ವಾಂಸರು ಸಾಧಕರುಗಳಿಂದ ನಮ್ಮ ದೇಶ ಶ್ರೇಷ್ಠವಾಗಿದ್ದು, ಇತರ ದೇಶಗಳಿಗೆ ಹೋಲಿಸದೆ ಅವರ ಪ್ರೇರಣೆಯಿಂದ ತಾವು ಸಹ ಸಾಧಕರಾಗಬೇಕು ಎಂದು ಬೆಳಗಾವಿಯ ಸಿದ್ದಾರ್ಥ ಮುತಕೆಕರ ಹೇಳಿದರು.
ಶನಿವಾರದಂದು ನಗರದ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಂದೆ ತಾಯಿಯರ ಕನಸುಗಳನ್ನು ನನಸುಗೋಳಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ನಮ್ಮನ್ನು ವಿದ್ಯಾವಂತರು ಮಾಡುವಲ್ಲಿ ತಂದೆ ತಾಯಿಗಳ ಪಾತ್ರ ದೊಡ್ಡದಾಗಿದ್ದು, ಅವರ ಕಂಡ ಕನಸುಗಳನ್ನು ಸಾಕರಗೊಳಿಸುವ ದಿಸೆಯಲ್ಲಿ ತಮ್ಮ ಕಾರ್ಯ ಶಮತೆ ಇರಬೇಕು ಎಂದ ಅವರು
ನಮ್ಮ ಅಕ್ಕ ಪಕ್ಕದಲ್ಲಿರುವ ನಡೆಯುವ ಘಟನೆಗಳನ್ನು ಬಗ್ಗೆ ಅಧ್ಯಯನ ಶೀಲರಾಗಬೇಕು ಇವು ಸಹ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಸಿಸುತ್ತವೆ. ಜೀವನದಲ್ಲಿ ಸಾಧನೆ ಮಾಡಲು ವಯಸ್ಸಿನ ಮಿತಿ ಇಲ್ಲ ಸತತ ಪ್ರಯತ್ನದಿಂದ ನಾವು ಸಾಧನೆಯನ್ನು ಮಾಡಬಹುದು. ವ್ಯಕ್ತಿತ್ವವ ಅವನು ಧರಿಸುವ ವಸ್ತ್ರಗಳಿಂದ ಅಳೆಯುದಲ್ಲ ಅವನು ಮಾಡುವ ಸತ್ಕಾರ್ಯದಿಂದ ಆತನ ವ್ಯಕ್ತಿತ್ವ ಅಳೆಯಬೇಕು. ವಿದ್ಯಾರ್ಥಿ ಜೀವನದ ನಂತರ ತಾವು ಒಳ್ಳೆಯವರಾಗಿ ತಾವು ಗಳಿಸುವ ಹಣದಲ್ಲಿ ಒಂದಿಷ್ಟು ಸಮಾಜಕ್ಕೆ ಹಿಂತಿರುಗಿಸಿ ಸಮಾಜದ ಋಣ ತಿರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ವರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕರಿಸಿ, ಗೌರವಿಸಲಾಯಿತು .
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಈಟಿ, ಆಡಳಿತಾಧಿಕಾರಿ ಅಡಿವೇಶ ಗವಿಮಠ, ಅರ್ಪಣಾ ಕುಲಕರ್ಣಿ, ವಿದ್ಯಾರ್ಥಿ ಪ್ರತಿನಿಧಿ ಗೀತಾ ಮಾರಿಹಾಳ ಉಪಸ್ಥಿತರಿದ್ದರು.
