ಮೂಡಲಗಿ:ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ
ಡಾ.ಬಿ.ಎಸ್. ಮದಬಾಂವಿ ಅವರ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯ : ಭೀಮಪ್ಪಾ ಗಡಾದ
ಮೂಡಲಗಿ ನ 2: ಡಾ.ಬಿ.ಎಸ್. ಮದಬಾಂವಿ ಅವರ 30 ವರ್ಷ ಸುಧೀರ್ಘ ವೈದ್ಯಕೀಯ ಸೇವೆ ಅವಿಸ್ಮರಣೀಯವಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ , ಸಮಾಜ ಸೇವಕ ಶ್ರೀ ಭೀಮಪ್ಪಾ ಗಡಾದ ಹೇಳಿದರು
ಬುಧವಾರದಂದು ಸ್ಥಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈಧ್ಯಾಧಿಕಾರಿ ಡಾ : ಬಿ. ಎಸ್. ಮದಬಾಂವಿ ಇವರ ಬಿಳ್ಕೋಡುವ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಕಳೆದ ಹಲವು ವರ್ಷಗಳಿಂದ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮದಬಾಂವಿ ಅವರು ಮೂಡಲಗಿ ಆಸ್ಪತ್ರೆಯನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಅವರ ನಿವೃತ್ತಿ ಜೀವನ ಅತ್ಯಂತ ಸುಖಕರವಾಗಿರಲ್ಲಿ ಎಂದು ಭೀಮಪ್ಪಾ ಗಡಾದ ಶುಭಕೋರಿದರು
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಿದ್ದ ಸಂಸ್ಥಾನ ಮಠದ ಶ್ರೀ. ಶ್ರೀ.ಶ್ರೀ. ಪಾಧಬೋಧ ಸ್ವಾಮೀಜಿ ಯವರು ವಹಿಸಿದ್ದರು ಈ ಸಂದರ್ಭದಲ್ಲಿ ಆರೋಗ್ಯ ರಕ್ಷಾ ಸಮೀತಿಯ ಅಧ್ಯಕ್ಷರಾದ ಶ್ರೀ. ಶಂಕರಯ್ಯಾ. ಹಿರೇಮಠ, ಮೂಡಲಗಿ ಆರಕ್ಷಕ ಠಾಣೆಯ ಪಿ. ಎಸ್. ಐ. ಎಚ್. ವಾಯ್. ಬಾಲದಂಡಿ ಸರ, ಪುರಸಭೆ ಸಧಸ್ಯರಾದ ಈರಣ್ಣಾ ಬನ್ನೂರ, ಈರಣ್ಣಾ. ಕೋಣ್ಣೂರ, ವಿಜಯ. ಸೋನವಾಲ್ಕರ, ರವಿ. ಸೋನವಾಲ್ಕರ ಶಿವಬಸು. ಹಂದಿಗುಂದ, ಶ್ರೀಮಂತ. ಲಟ್ಟಿ, ಹಾಗೂ ಸ್ಥಳೀಯ ಪತ್ರಕತ೯ರಾದ ವಾಯ್. ವಾಯ್. ಸುಲ್ತಾನಪೂರ, ಎಲ್. ಸಿ. ಗಾಡವಿ, ಸುದಾಕರ. ಉಂದ್ರಿ, ಮಹಾನಿಂಗಯ್ಯಾ. ನಂದಗಾಂವಮಠ, ಅಲ್ತಾಪ. ಹವಾಲ್ದಾರ, ಈಶ್ವರ. ಮಗದುಮ್ಮ, ಚೇತನ. ನಿಶಾನಿಮಠ, ನವೀನ. ನಿಶಾನಿಮಠ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿವಗ೯ದವರು ಉಪಸ್ಥಿತರಿದ್ದರು.