RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ : ಮುರುಘರಾಜೇಂದ್ರ ಶ್ರೀ 

ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ : ಮುರುಘರಾಜೇಂದ್ರ ಶ್ರೀ

ಗೋಕಾಕ ಏ 5 : ಧರ್ಮ ಸಂಸ್ಕಾರದಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕಾಗಿದೆ ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಶನಿವಾರದಂದು ನಗರದ ಬಸವ ಮಂದಿರದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸ್ಥಳೀಯ ಮಹಿಳಾ ಘಟಕದ ವತಿಯಿಂದ ದಿನಾಂಕ 1 ರಿಂದ 5ರವರೆಗೆ ಹಮ್ಮಿಕೊಂಡ ಬಸವ ಧರ್ಮ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಸಂಸ್ಕಾರ ನೀಡಿದರೆ ಅದನ್ನು ಆಚರಣೆಗೆ ತರುವದರೊಂದಿಗೆ ಸಂಸ್ಕಾರವಂತ ಸಮಾಜ ನಿರ್ಮಿಸುತ್ತಾರೆ. ಲಿಂಗವನ್ನು ಆಯಾತ ಮಾಡುವವರೆಲ್ಲಾ ಲಿಂಗಾಯತರು. ಪ್ರತಿನಿತ್ಯ ಲಿಂಗ ಪೂಜೆ ಮಾಡಿದರೆ ಪಾಪ ಮುಕ್ತರಾಗುತ್ತೇವೆ. ಇಷ್ಟ ಲಿಂಗವನ್ನು ನೋಡುತ್ತಾ ನಾವೇ ದೇವರಾಗುತ್ತೇವೆ. ಬ್ರಹ್ಮಾಂಡ ಗೋಲಾಕಾರವಾಗಿದೆ ಲಿಂಗವೂ ಗೋಲಾಕಾರವಾಗಿದ್ದು, ಅದರಿಂದ ನಾವು ದೇವರಾಗುತ್ತೇವೆ ಎಂಬ ಸಿದ್ದಾಂತವನ್ನು ಶರಣರು ನೀಡಿದ್ದು ಅದರ ಆಚರಣೆಯಿಂದ ಕಷ್ಟಗಳಿಂದ ದೂರವಾಗಿ ನೆಮ್ಮದಿಯ ಜೀವವನ್ನು ಸಾಗಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ಶಿಬಿರದ ನೇತೃತ್ವ ವಹಿಸಿದ ಹಾರುಗೇರಯ ಐ.ಆರ್.ಮಠಪತಿ, ಸಂಘದ ಅಧ್ಯಕ್ಷೆ ಮಹಾದೇವಿ ಉಪ್ಪಿನ, ಕಾರ್ಯದರ್ಶಿ ಹರ್ಷಿತಾ ಸವಣೂರ, ಅನುಸೂಯಾ ದಯನ್ನವರ, ಅನೀತಾ ಜೋಡಟ್ಟಿ, ರಷ್ಮೀ ಮಾಸ್ತಿ ಸೇರಿದಂತೆ ಅನೇಕರು ಇದ್ದರು.

Related posts: