RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಗೋಕಾಕ:ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ 

ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಗೋಕಾಕ ಏ 5 : ಬೆಲೆ ಏರಿಕೆ, ತೆರಿಗೆ ಹೆಚ್ಚಳ, ರಾಜ್ಯ ಸರಕಾರದ ವಿರುದ್ಧ ಹಾಗೂ ಏರಿಸಿದ ಬೆಲೆಯನ್ನು ಹಿಂಪಡೆಯಬೇಕು, ಅಲ್ಪಸಂಖ್ಯಾತರಿಗೆ ಸಂವಿಧಾನ ಬಾಹಿರವಾಗಿ ನೀಡಿದ ಕಾಮಗಾರಿಗಳ ಮೀಸಲಾಯಿಯನ್ನು ಆಕ್ಷೇಪಿಸಿ, ಎಸ್.ಸಿ.,ಎಸ್.ಟಿ.ಮೀಸಲು ಹಣದ ದುರ್ಬಳಕೆಯನ್ನು ಖಂಡಿಸಿ ಮತ್ತು ಬಿಜೆಪಿಯ 18 ಶಾಸಕರ ಅಮಾತನ್ನು ವಿರೋಧಿಸಿ ಇಲ್ಲಿನ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ರಾಜ್ಯ ಪಾಲರಿಗೆ ಮನವಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗೋಕಾಕ ನರಗ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನರಗಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮುಖಂಡರುಗಳಾದ ಲಕ್ಷ್ಮಣ ತಪಸಿ, ಅಬ್ಬಾಸ ದೇಸಾಯಿ, ಶಕೀಲ ಧಾರವಾಡಕರ, ಲಕ್ಕಪ್ಪ ತಹಶೀಲ್ದಾರ, ಬಸವರಾಜ ಆರೆನ್ನವರ, ಬಸವರಾಜ ಮಾಳಗಿ, ಬಾಬು ಮುಳಗುಂದ, ಲಕ್ಷ್ಮಣ ತಳ್ಳಿ, ಸುರೇಶ ಪತ್ತಾರ, ಮಂಜುನಾಥ ಮಾವರಕರ, ವಿರೇಂದ್ರ ಯಕ್ಕೇರಿಮಠ ಸೇರಿದಂತೆ ಅನೇಕರು ಇದ್ದರು.

Related posts: