ಗೋಕಾಕ:ಶಾಸಕ ಸ್ಥಾನದಿಂದ ಅರ್ನಹಗೊಂಡರು ಚಿಂತೆಯಿಲ್ಲ : ಸರ್ಕಾರ ಕಡೆವುತ್ತೇನೆ ಶಾಸಕ ರಮೇಶ ಶಪಥ
ಶಾಸಕ ಸ್ಥಾನದಿಂದ ಅರ್ನಹಗೊಂಡರು ಚಿಂತೆಯಿಲ್ಲ : ಸರ್ಕಾರ ಕಡೆವುತ್ತೇನೆ ಶಾಸಕ ರಮೇಶ ಶಪಥ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 12 :
ರಾಜ್ಯ ರಾಜಕೀಯದ ಹೈಡ್ರಾಮ ನಡೆದು ಬೆಂಕಿ ಬಿರುಗಾಳಿ ರಾಜ್ಯ ರಾಜಕೀಯದಲ್ಲಿ ಎದ್ದಿದ್ದೆ . ರಾಜ್ಯ ಹಿಂದೆಂದು ಕಂಡ ಕಾಣದ ಧಾರುಣ ಪರಿಸ್ಥಿಯನ್ನು ಎದುರಿಸುತ್ತಿದೆ . ಇದರ ನಡುವೆ ಸುಪ್ರೀಂ ಕೋರ್ಟ್ ಕೂಡ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರವನ್ನಾಗಲೀ, ರಾಜೀನಾಮೆ ಅಂಗೀಕಾರವನ್ನಾಗಲೀ ಮಾಡದೇ ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚಿಸಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಕೊಂಚ ರಿಲೀಫ್ ಸಿಕ್ಕಿದೆ.
ಆದರೆ, ಸರ್ಕಾರವನ್ನು ಉರುಳಿಸಲೇಬೇಕು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಪಣತೊಟ್ಟಿದ್ದಾರೆ.
ಹೌದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ದೂರದ ಮುಂಬೈನಲ್ಲಿ ಕುಳಿತಿರುವ ಬೆಳಗಾವಿಯ ಸಾಹುಕಾರ ರಮೇಶ್ ಜಾರಕಿಹೊಳಿ ಆಪ್ತರ ಬಳಿಕ ಸರ್ಕಾರ ಕಡೆವುತ್ತೇನೆ ಎಂದು ಶಪಥ ಮಾಡಿದ್ದಾರೆ. ಅದಕ್ಕಾಗಿ ಮತ್ತಷ್ಟು ಶಾಸಕರನ್ನು ಸೆಳೆಯಲು ಮಾತುಕತೆ ನಡೆಸುತ್ತಿದ್ದಾರೆ.
ಶಾಸಕ ಸ್ಥಾನದಿಂದ ಅನರ್ಹಗೊಂಡರೂ ಚಿಂತೆಯಿಲ್ಲ.ಈ ಬಾರಿ ಸರ್ಕಾರ ಉಳಿಯಬಾರದು ಎಂಬುದು ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರ ಧೃಡ ನಿರ್ಧಾರ ಮಾಡಿದ್ದಾರೆ . ಇದರಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಆತಂಕ ಎದುರಾಗಿದೆ.
ಮುಂಬೈನಲ್ಲಿರುವ ರಮೇಶ್ ಜಾರಕಿಹೊಳಿ ಅವರು ಶಾಸಕರ ಜೊತೆ ಮಾತಕತೆ ನಡೆಸುವಾಗ ಈ ಸರ್ಕಾರ ಉಳಿಯಬಾರದು ಎಂದು ಹೇಳಿದ್ದಾರೆ. ‘ಶಾಸಕ ಸ್ಥಾನದಿಂದ ಅನರ್ಹಗೊಂಡರೆ ಅಳಿಯ ಅಂಬಿರಾವ್ ಪಾಟೀಲ ಅಥವ ಬೇರೆಯವನ್ನು ನಿಲ್ಲಿಸಿ ಗೆಲ್ಲಿಸುವೆ. ಆದರೆ, ಸರ್ಕಾರ ಮಾತ್ರ ಉಳಿಯಬಾರದು’ ಎಂದು ಹೇಳಿದ್ದಾರೆ.
‘ಅಥಣಿ ಶಾಸಕ ಮಹೇಶ್ ಕಮಟಳ್ಳಿ ಅವರ ನನ್ನ ಜೊತೆ ಇದ್ದಾರೆ. ಅವರು ಅನರ್ಹಗೊಂಡರೆ ಪತ್ನಿ ಅಥವ ಪುತ್ರನನ್ನು ನಿಲ್ಲಿಸಿ ಗೆಲ್ಲಿಸುವರು. ಆದರೆ, ಈ ಬಾರಿ ಮಾತ್ರ ಸರ್ಕಾರ ಉರುಳಿಸುವುದು ಖಂಡಿತ’ ಎಂದು ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.