ಗೋಕಾಕ:ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಒರ್ವನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ:
ಒರ್ವನಿಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು
ಗೋಕಾಕ ನ 2 : ಎಸ್ಸೆಸ್ಸೆಲ್ಸಿ ತರಗತಿ ಮುಗಿಸಿ ಹೊರಗೆ ಬರುತ್ತಿದ್ದ ಸಂದರ್ಭದಲ್ಲಿ ಬ್ಯಾಗ್ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಚಾಕು ಇರಿತದಿಂದ ಒರ್ವ ವಿದ್ಯಾರ್ಥಿ ಗಾಯಗೊಂಡಿದ್ದಾನೆ.
ನಗರದಲ್ಲಿರುವ ಸರಕಾರಿ ಪ್ರೌಡ ಶಾಲಾ ಆವರಣದಲ್ಲಿ ಮೂವರು ವಿದ್ಯಾರ್ಥಿಗಳಿಂದ ಒರ್ವ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ನಡೆದಿದೆ. ಶಾಲಾ ಕೋಠಡಿಯಲ್ಲಿ ಇಟ್ಟಿದ ಶಾಲಾ ಬ್ಯಾಗ್ ತರಲು ನಿರಾಕರಿಸಿದ್ದರಿಂದ ಸಹಪಾಠಿಗಳಿಂದ ಚಾಕು ಇರಿತ ನಡೆದಿದೆ ಎಂದು ಹೇಳಲಾಗುತ್ತಿದೆ.
ಸಾಯಂಕಾಲ ಶಾಲೆ ಬಿಟ್ಟ ನಂತರ ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಓದುತ್ತಿದ್ದ ಪ್ರದೀಪ ಬಂಡಿವಡ್ಡರ ಇತನಿಗೆ ಅದೆ ಶಾಲೆಯಲ್ಲಿ ಓದುತಿದ್ದ ಸಹಪಾಠಿಗಳಾದ ರವಿ ಚಿನ್ನವ, ಅಶೋಕ ಕಂಕಣವಾಡಿ,ಸಿದ್ದಾರ್ಥ ಮತ್ತಿಕೊಪ್ಪ ಇವರೆಲ್ಲರೂ ಸೇರಿ ತಮ್ಮ ಬ್ಯಾಗ ತರಲು ಹೇಳಿದ್ದಾರೆ. ಆತ ಬ್ಯಾಗ ತರಲು ನಿರಾಕರಿಸಿದ್ದಕ್ಕೆ ಆಕ್ರೊಶಗೊಂಡ ಮೂವರು ಸೇರಿ ಕುತ್ತಿಗೆ,ಕೈ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಾಕು ಇರಿತಕ್ಕೆ ಒಳಗಾದ ಪ್ರದೀಪ್ ರಕ್ತ ಸ್ರಾವದಿಂದ ಸ್ಥಳದಲ್ಲಿ ಬಿದ್ದಿದ್ದಾನೆ. ಇದನ್ನು ಕಂಡ ಶಾಲೆಯ ಶಿಕ್ಷಕರು ಚಿಕಿತ್ಸೆಗಾಗಿ ಆತನನ್ನು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ವಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ದಾಖಲಿಸಲಾಗಿದೆ.
ಸುದ್ದಿ ತಿಳಿದ ನಗರ ಪೋಲಿಸರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವನಿಂದ ಮಾಹಿತಿ ಪಡೆದು, ಆರೋಪಿಗಳ ಪತ್ತೆ ಶೋಧ ನಡೆಸಿದ್ದಾರೆ. ಈ ಕುರಿತು ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.