ಗೋಕಾಕ:ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು : ಶಾಸಕ ರಮೇಶ್

ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು : ಶಾಸಕ ರಮೇಶ್
ಗೋಕಾಕ ಎ 14 : ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ನೀಡುವ ಮೂಲಕ ಡಾ.ಬಿ ಆರ್ ಅಂಬೇಡ್ಕರ ಅವರು ದೇಶ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಗರ ಹಾಗೂ ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡ ಡಾ. ಬಿ ಆರ್ ಅಂಬೇಡ್ಕರ ಅವರ 133ನೇಯ ಜನ್ಮ ಜಯಂತಿಯ ಕಾರ್ಯಕ್ರಮದಲ್ಲಿ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ಸಂವಿಧಾನ ಶಿಲ್ಪಿ ಡಾ. ಬಾಬಾಸೇಹಬ ಅಂಬೇಡ್ಕರ ಅವರು ನೀಡಿದ ಸಂವಿಧಾನವನ್ನು ಎಲ್ಲರೂ ಗೌರವಿಸಿ ಆಚರಣೆಗೆ ತರುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಪ್ರಧಾನ ಕಾರ್ಯದರ್ಶಿ ಜಯಾನಂದ ಹುಣಚ್ಯಾಳ, ದಲಿತ ಮೋರ್ಚಾ ಅಧ್ಯಕ್ಷ ಮಂಜುನಾಥ ಮಾವರಕರ, ರೈತಮೋರ್ಚಾ ಅಧ್ಯಕ್ಷ ಸುರೇಶ ಪತ್ತಾರ, ಲಕ್ಷ್ಮೀಕಾಂತ ಎತ್ತಿನಮನಿ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಅಬ್ಬಾಸ ದೇಸಾಯಿ, ಈಶ್ವರ ಬಾಗೋಜಿ, ಬಾಳಪ್ಪ ತೋಟಗಿ, ಶಫಿ ಜಮಾದಾರ ಸೇರಿದಂತೆ ಅನೇಕರು ಇದ್ದರು.