ಗೋಕಾಕ:ಅರ್ಪಿತಾ ಹರಡಿಗೆ ಮುರಘರಾಜೇಂದ್ರ ಶ್ರೀಗಳಿಂದ ಸತ್ಕಾರ
ಅರ್ಪಿತಾ ಹರಡಿಗೆ ಮುರಘರಾಜೇಂದ್ರ ಶ್ರೀಗಳಿಂದ ಸತ್ಕಾರ
ಗೋಕಾಕ ಡಿ 6: ನಗರದ ಶ್ರೀ ಶೂನ್ಯ ಸಂಪಾದನಾ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಮಹಾವಿದ್ಯಾಲಯ ಗೋಕಾಕದ (4366) ದ ವಿದ್ಯಾರ್ಥಿನಿಯಾದ ಅರ್ಪಿತಾ ಹರಡಿ ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೇ/ಜೂನ 2017 ರಲ್ಲಿ ನಡೆದ ಬಿಎಸಸಿ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ ಎರಡೆನೇಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ . ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಿದ್ಯಾರ್ಥಿನಿಯನ್ನು ಸನ್ಮಾನಿಸಿ , ಗೌರವಿಸಿದರು ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಪ್ರಾರ್ಚಾಯ್ಯ ಮತ್ತು ಸಿಬ್ಬಂದಿಯರು ಉಪಸ್ಥಿತರಿದ್ದರು