RNI NO. KARKAN/2006/27779|Friday, May 17, 2024
You are here: Home » breaking news » ಗೋಕಾಕ:ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ ರಸ್ತೆ ಸಂಚಾರ ಪುನಾರಂಭ

ಗೋಕಾಕ:ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ ರಸ್ತೆ ಸಂಚಾರ ಪುನಾರಂಭ 

ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ  ರಸ್ತೆ ಸಂಚಾರ ಪುನಾರಂಭ

ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಅ 13 :

ಭಾರಿ ಪ್ರಮಾಣದ ಪ್ರವಾಹದಿಂದಾಗಿ ಕಳೆದ ಒಂದು ವಾರದಿಂದ ಸ್ಥಗಿತವಾಗಿದ್ದ ಮಾರ್ಕೆಂಡೆಯ ನದಿಯ ಚಿಕ್ಕೋಳಿ ಸೇತುವೆ  ರಸ್ತೆ ಸಂಚಾರ ಮಂಗಳವಾರ ಪುನಾರಂಭವಾಗಿದೆ.

ಮಾರ್ಕೆಂಡೆಯ ನದಿಯ ಹೊರ ಹರಿವು ಕಡಿಮೆಯಾದ ಪರಿಣಾಮ ಮಂಗಳವಾರ ಬೆಳಗ್ಗೆ  ಸಂಚಾರಕ್ಕೆ ತೆರವುಗೊಳಿಸಿ ಸೇತುವೆ ಮೇಲೆ ದ್ವಿಮುಖ ಸಂಚಾರ ಆರಂಭಿಸಲಾಯಿತು.

ಸ್ಥಳದಲ್ಲಿ ಪೊಲೀಸ ಸಿಬ್ಬಂದಿಗಳ ನಿಯೋಜನೆಗೊಂಡು ಸಂಚಾರ ದಟ್ಟಣೆ ಮತ್ತು ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ ನಿರತರಾಗಿದ್ದಾರೆ. ಪ್ರವಾಹದಿಂದ ಸೇತುವೆ ಮುಳುಗಡೆಯಾಗಿ  ಸಂಚಾರ ಸಂಪೂರ್ಣವಾಗಿ ಬಂದಾಗಿದ್ದ ಪರಿಣಾಮ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಬೇಟ್ಟಿ ನೀರಿ ಸೇತುವೆಯ ಪರಿಸ್ಥಿಯನ್ನು ಅವಲೋಕಿಸಿ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ಪೂರೈಸಿ ಸಂಚಾರಕ್ಕೆ ಮುಕ್ತಗೋಳಿಸಿದರು‌ .

ವಾರದ ನಂತರ ತೆರುವಾದ ಸೇತುವೆಯನ್ನು ವಿಕ್ಷೀಸಲು ಜನಜಂಗುಳಿ ಹರಿದು ಬರುತ್ತಿದ್ದು , ವಾಹನಗಳು ಸಾಲುಗಟ್ಟಿ ಹೋಗುತ್ತಿವೆ ಇದನ್ನು ನಿಯಂತ್ರಿಸಲು ಪೊಲೀಸರು ಕಾರ್ಯಪ್ರವೃತವಾಗಿದ್ದಾರೆ.

ಒಂದು ವಾರದಿಂದ ಇಂಧನ ಸೇರಿದಂತೆ ಯಾವುದೇ ವಾಹನಗಳು ನಗರಕ್ಕೆ ಸಂಚರಿಸದಂತೆ ಗೋಕಾಕ ನಗರದ  ದ್ವೀಪದಂತಾಗಿತ್ತು.

ಇಂದು ಸ್ವಲ್ಪ ನಿಟ್ಟುಸಿರು ಬಿಟ್ಟಿರುವ ವಾಹನ ಸವಾರರು ಈ ಮಾರ್ಗವಾಗಿ ರಾಕೆಟ್ ರಿದ್ದಿಸಿದ್ದಿ ಕಾರಖಾನೆ, ಗೋಕಾಕ ಫಾಲ್ಸ,ಕೊಣ್ಣೂರ, ಸೇರಿದಂತೆ ಇತರ ಪ್ರದೇಶಗಳತ್ತ ಸಂಚರಿಸುತ್ತಿದ್ದಾರೆ.

 
ಸೋಮವಾರದಿಂದ  ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಸಾರಿಗೆ ಸಂಸ್ಥೆಯ ಬಸ್ ಗಳೂ ಸಂಚಾರ ಆರಂಭಿಸಿದ್ದು, ಬಸ್ ನಿಲ್ದಾಣದಲ್ಲಿ ಜನರು ತುಂಬಿದ್ದರು. ಗ್ರಾಮೀಣ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಉಳಿದಂತೆ ಎಲ್ಲೆಡೆ ಪ್ರವಾಹ ಕಡಿಮೆಯಾಗುತ್ತಿದೆ. ಲೋಳಸೂರ ಸೇತುವೆಯ ಮೇಲೆ ನೀರಿನ ಪ್ರಮಾಣ ಕಡಮೆಯಾಗಿದ್ದರು ಸಹ ಸೇತುವೆ ಮೇಲೆ ವಿದ್ಯುತ್ ಕಂಬ್,ಮರಗಳು ಬಿದಿದ್ದರಿಂದ ತೆರುವು ಕಾರ್ಯ ಭರದಿಂದ ಸಾಗಿದ್ದು , ಇನ್ನೆರಡು ದಿನಗಳಲ್ಲಿ ಸಂಚಾರ ಸಂಪೂರ್ಣ ಸುಗಮವಾಗುವ ನಿರೀಕ್ಷೆ ಇದೆ.

 

Related posts: