ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ : ಗಾಯನ ಸ್ವರ್ಧೆಯಲ್ಲಿ ಅಮೋಘ ದೇಶಪಾಂಡೆ ಪ್ರಥಮ

ಸತೀಶ ಪ್ರತಿಭಾ ಪುರಸ್ಕಾರ : ಗಾಯನ ಸ್ವರ್ಧೆಯಲ್ಲಿ ಅಮೋಘ ದೇಶಪಾಂಡೆ ಪ್ರಥಮ
ಯಮಕನಮರಡಿ ನ 26 : ಶನಿವಾರದಂದು ಗ್ರಾಮದ ಎನ್.ಎಸ್.ಎಫ್ ಶಾಲಾ ಆವರಣದಲ್ಲಿ ನಡೆದ 10ನೇ ಸತೀಶ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಾಥಮಿಕ , ಪ್ರೌಢ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಗಾಯನ, ಸಮೂಹ ನೃತ್ಯ , ಜಾನಪದ ನೃತ್ಯ ಸ್ವರ್ಧೆಗಳು ಆಯೋಜಿಸಿಲಾಗಿತ್ತು.
ಪ್ರಾಥಮಿಕ ವಿಭಾಗದ ಗಾಯನ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಅಮೋಘವರ್ಷ ದೇಶಪಾಂಡೆಗೆ ಬಹುಮಾನ 10 ಸಾವಿರ, ದ್ವಿತೀಯ ಪಡೆದ ಸಂದೀಪ್ ಬಂಡಿವಡ್ಡರಗೆ 7 ಸಾವಿರ , ತೃತೀಯ ಸ್ಥಾನ ಪಡೆದ ಪ್ರಯುಕ್ತಾ ಇಸ್ಲಾಂಪೂರೆ ಗೆ 5 ಸಾವಿರ. ಹಾಗೂ ಕಾಲೇಜು ವಿಭಾಗದ ಗಾಯನ ಸ್ವರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ರಾಣಿ ಪತ್ತಾರ ಗೆ 15 ಸಾವಿರ,
ದ್ವಿತೀಯ ಸ್ಥಾನ ಪಡೆದ ದೀಪಕಕುಮಾರ ಪೂಜಾರಿ ಗೆ 10 ಸಾವಿರ,
ತೃತೀಯ ಸ್ಥಾನ ಪಡೆದ ಪ್ರೇಮಾ ವಾಗಣ್ಣವರ ಗೆ 7 ಸಾವಿರ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.
ಪ್ರೌಢಶಾಲಾ ವಿಭಾಗ ಜಾನಪದ ನೃತ್ಯದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಕಾವೇರಿ ಮತ್ತು ತಂಡ ಸರಕಾರಿ ಪ್ರೌಢಶಾಲೆ, ಶಿರಗಾಂವ, ನಗದು 50 ಸಾವಿರ, ದ್ವಿತೀಯ ಸ್ಥಾನ ಪಡೆದ ಲಕ್ಷ್ಮೀ ಪಾಟೀಲ ಮತ್ತು ಸಂಗಡಿಗರು ಸರಕಾರಿ ಪ್ರೌಢ ಶಾಲೆ, ಅತ್ತಿಹಾಳ
ತಂಡಕ್ಕೆ ನಗದು 40 ಸಾವಿರ , ತೃತೀಯ ಸ್ಥಾನ ಪಡೆದ ಸಾವಿತ್ರಿ ಮತ್ತು ಸಂಗಡಿಗರು ಎಚ್.ಡಿ.ಪಿ ಪ್ರೌಢಶಾಲೆ ಹಿಡಕಲ್ ಡ್ಯಾಮ್ ತಂಡಕ್ಕೆ 30 ಸಾವಿರ ಹಾಗೂ ಪ್ರಾಥಮಿಕ ವಿಭಾಗದ ಸಮೂಹ ನೃತ್ಯದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಸೃಷ್ಟಿ ಡೋಣವಾಡಿ ಮತ್ತು
ಸಂಗಡಿಗರು ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಿಡಸೋಸಿ ತಂಡಕ್ಕೆ ನಗದು 50 ಸಾವಿರ ,
ದ್ವಿತೀಯ ಸ್ಥಾನ ಪಡೆದ ಆದಿತಿ ಕಡಬಡ್ಡಿ ಹಾಗೂ ಸಂಗಡಿಗರು ಡಾ.ಗಂಗಾಧರ ಇಂಗ್ಲಿಷ್ ಮಾಧ್ಯಮ ವಸತಿ ಪ್ರೌಢ ಶಾಲೆ ಶಿರಢಾಣ ತಂಡಕ್ಕೆ ನಗದು 40 ಸಾವಿರ , ತೃತೀಯ ಸ್ಥಾನ ಪಡೆದ ಐಶ್ವರ್ಯ ವರದನ್ನವರ ಹಾಗೂ ಸಂಗಡಿಗರು ಬಸವೇಶ್ವರ ಆದರ್ಶ ಕನ್ನಡ ಮಾಧ್ಯಮ ಶಾಲೆ ಗುಡಸ್ ತಂಡಕ್ಕೆ ನಗದು 30 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಯಮಕನಮರಡಿ ಮತಕ್ಷೇತ್ರದ ಮುಖಂಡರು, ರಾಜಕೀಯ ಧುರೀಣರು ಉಪಸ್ಥಿತರಿದ್ದರು.
