RNI NO. KARKAN/2006/27779|Wednesday, January 28, 2026
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ : ವೈಶಾಲಿ ಲೊಕುಂಡೆ

ಗೋಕಾಕ:ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ : ವೈಶಾಲಿ ಲೊಕುಂಡೆ 

ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ : ವೈಶಾಲಿ ಲೊಕುಂಡೆ

ಗೋಕಾಕ ಅ 1 : ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ತಮ್ಮ ಜ್ಞಾನ ಮಟ್ಟವನ್ನು ಹೆಚ್ಚಿಸಿಕೊಂಡು ಪ್ರತಿಭಾನ್ವಿತರಾಗುವಂತೆ ಇನ್ನರ ವ್ಹೀಲ್ ಸಂಸ್ಥೆಯ ಜಿಲ್ಲಾ ಚೇರಮನ್ ವೈಶಾಲಿ ಲೊಕುಂಡೆ ಹೇಳಿದರು.
ಅವರು, ಮಂಗಳವಾರದಂದು ನಗರದ ಜಿಇಎಸ್ ಪ್ರೌಢಶಾಲೆಯಲ್ಲಿ ಇಲ್ಲಿನ ಇನ್ನರ್ ವ್ಹಿಲ್ ಸಂಸ್ಥೆಯವರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಇನ್ನರ್ ವ್ಹಿಲ್ ಸಂಸ್ಥೆಯು ಸಾಮಾಜಿಕ ಕಳಕಳಿಯೊಂದಿಗೆ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಶ್ರಮಿಸುತ್ತಿದೆ. ಜನತೆ ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಇನ್ನರ್ ವ್ಹಿಲ್ ಸಂಸ್ಥೆಯ ಅಧ್ಯಕ್ಷೆ ವಿದ್ಯಾ ಗುಲ್ಲ್, ಕಾರ್ಯದರ್ಶಿ ಬಬಿತಾ ಪಂಚನ್ನವರ, ಪದಾಧಿಕಾರಿಗಳಾದ ಅಶ್ವಿನಿ ಭರಮನ್ನವರ, ವಿಜಯಲಕ್ಷ್ಮೀ ಗಂಜಿ, ಪೂರ್ಣಿಮಾ ಹುಕ್ಕೇರಿ, ರೂಪಾ ಮುನವಳ್ಳಿ, ಆರತಿ ನಾಡಗೌಡ, ಮುಖ್ಯೋಪಾಧ್ಯಾಯಿನಿ ಎಸ್ ಎಸ್ ಇಜೇರಿ ಸೇರಿದಂತೆ ಅನೇಕರು ಇದ್ದರು.

Related posts: