ಗೋಕಾಕ:ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಸೌಭಾಗ್ಯ ಕೊಪ್ಪ

ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಸೌಭಾಗ್ಯ ಕೊಪ್ಪ
ಗೋಕಾಕ ಜು 4 : ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ ಎಂದು ಸಾಹಿತಿ ಸೌಭಾಗ್ಯ ಕೊಪ್ಪ ಹೇಳಿದರು.
ಅವರು, ಸೋಮವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾ ಭವನದಲ್ಲಿ ಸ್ವರ ಸಂಗಮದವರು ಸಂತ ಶಿಶುನಾಳ ಪ್ರಶಸ್ತಿ ಪುರಸ್ಕøತ ಪಂಡಿತ ಶ್ರೀ ಈಶ್ವರಪ್ಪ ಮಿನಚಿ ಇವರ ಸ್ಮರಣಾರ್ಥ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತ ದೇಶದ ಸಂಸ್ಕøತಿಯಲ್ಲಿ ತಂದೆ-ತಾಯಿ ಹಾಗೂ ಗುರುಗಳನ್ನು ದೇವರೆಂದು ಪೂಜಿಸುತ್ತಾರೆ. ಕತ್ತಲೆಯಿಂದ ಬೆಳಕಿನೆಡೆ ಕರೆದೊಯ್ಯುವ ಗುರುಗಳನ್ನು ಸದಾ ಗೌರವಿಸೋಣ. ಸಂಗೀತ ಕಲಾವಿದರಾದ ಈಶ್ವರಪ್ಪ ಮಿನಚಿ ಅವರು ಅಪಾರ ಶಿಷ್ಯ ಬಳಗವನ್ನು ನಾಡಿಗೆ ನೀಡಿ ನಮ್ಮೆಲ್ಲರ ಮನದಲ್ಲಿ ಸದಾ ನೆಲೆಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಿಂದುಸ್ಥಾನಿ ಸಂಗೀತ ಕಲಾವಿದೆ ಶ್ರೇಯಾ ಹಂದಿಗೋಳ ಅವರನ್ನು ಸತ್ಕರಿಸಲಾಯಿತು. ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಂಘಟಕರಾದ ವಿದ್ಯಾ ಮಗದುಮ, ಶಶಿಕಲಾ ಶಿಂಧೆ, ಗಣ್ಯರಾದ ನಟರಾಜ ಮಹಾಜನ, ಶೈಲಜಾ ದಳವಾಯಿ, ಮಹೇಶ್ವರಿ ತಾಂವಶಿ, ಜಯಾ ಕಮತ, ಸುವರ್ಣ ಗುಂಡಿ, ವಿದ್ಯಾ ಗುಲ್ಲ, ಮಲ್ಲಿಕಾರ್ಜುನ ವಕ್ಕುಂದ, ದಿನೇಶ ಜುಗಳಿ ಇದ್ದರು.