RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಕೆಎಸ್‍ಆರ್‍ಟಿಸಿಯು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜನಮನ್ನಣೆ ಗಳಿಸಬೇಕು : ಸಚಿವ ಜಾರಕಿಹೊಳಿ

ಗೋಕಾಕ:ಕೆಎಸ್‍ಆರ್‍ಟಿಸಿಯು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜನಮನ್ನಣೆ ಗಳಿಸಬೇಕು : ಸಚಿವ ಜಾರಕಿಹೊಳಿ 

ಕೆಎಸ್‍ಆರ್‍ಟಿಸಿಯು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜನಮನ್ನಣೆ ಗಳಿಸಬೇಕು : ಸಚಿವ ಜಾರಕಿಹೊಳಿ

ಗೋಕಾಕ ಡಿ 9 : ಕೆಎಸ್‍ಆರ್‍ಟಿಸಿಯು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಮೂಲಕ ಜನಮನ್ನಣೆ ಗಳಿಸಬೇಕೆಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರದಂದು ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಗೋಕಾಕದಿಂದ ಬೆಂಗಳೂರಿಗೆ ನೂತನ ಸ್ಲೀಪ್‍ರ ಕೋಚ್ ಬಸ್ ಸೇವೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಗೋಕಾಕ-ಮುಂಬೈ ಸೇವೆಯನ್ನು ಸಹ ಪ್ರಾರಂಭಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಟಿ.ಆರ್.ಕಾಗಲ್, ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜತ್ತಿ, ಸ್ಥಾಯಿ ಸಮಿತಿ ಚೇರಮನ್ ಭಗವಂತ ಹುಳ್ಳಿ, ಮಾಜಿ ನಗರಾಧ್ಯಕ್ಷ ಎಸ್.ಎ.ಕೊತವಾಲ, ನಗರಸಭಾ ಸದಸ್ಯರುಗಳಾದ ಪರುಶರಾಮ ಭಗತ, ಗಿರೀಶ ಖೋತ, ಜಯಾನಂದ ಹುಣಶ್ಯಾಳಿ, ಸಿದ್ದಪ್ಪ ಹುಚ್ಚರಾಯಗೋಳ, ಡಾ. ಅಬ್ದುಲ್‍ವಹಾಬ ಜಮಾದಾರ, ಎ.ಎ.ದೇಸಾಯಿ (ಅಬ್ಬಾಸ), ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಚಂದ್ರಶೇಖರ, ಕಾರ್ಮಿಕ ಅಧಿಕಾರಿ ಸತ್ಯನಾರಾಯಣ, ಸಾರಿಗೆ ಅಧಿಕಾರಿ ಶಶಿಧರ, ಎಮ್.ಆರ್.ಮುಂಜಿ, ತಾಂತ್ರಿಕ ಶಿಲ್ಪಿ ಎನ್.ಐ.ಪಾಟೀಲ, ಘಟಕ ವ್ಯವಸ್ಥಾಪಕ ಎಸ್.ಎಸ್.ತಳವಾರ, ಕಾರ್ಮಿಕ ಸಂಘದ ಮುಖಂಡ ಎಲ್.ಜಿ.ಪಾಟೀಲ ಇದ್ದರು.

Related posts: