RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಕಂಡಕ್ಟರ್ ಆದ ಲಖನ್ ಜಾರಕಿಹೊಳಿ : ಗೋಕಾಕದಲ್ಲಿ ಶಕ್ತಿ ಯೋಜನೆಗೆ ವಿದ್ಯುಕ್ತ ಚಾಲನೆ, ಹಾಲಿ ಶಾಸಕ ರಮೇಶ ಜಾರಕಿಹೊಳಿ ಗೈರು!

ಗೋಕಾಕ:ಕಂಡಕ್ಟರ್ ಆದ ಲಖನ್ ಜಾರಕಿಹೊಳಿ : ಗೋಕಾಕದಲ್ಲಿ ಶಕ್ತಿ ಯೋಜನೆಗೆ ವಿದ್ಯುಕ್ತ ಚಾಲನೆ, ಹಾಲಿ ಶಾಸಕ ರಮೇಶ ಜಾರಕಿಹೊಳಿ ಗೈರು! 

ಕಂಡಕ್ಟರ್ ಆದ ಲಖನ್ ಜಾರಕಿಹೊಳಿ : ಗೋಕಾಕದಲ್ಲಿ ಶಕ್ತಿ ಯೋಜನೆಗೆ  ವಿದ್ಯುಕ್ತ ಚಾಲನೆ, ಹಾಲಿ ಶಾಸಕ ರಮೇಶ ಜಾರಕಿಹೊಳಿ  ಗೈರು!

ಗೋಕಾಕ ಜೂ 11 : ಎಲ್ಲಾ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಇತ್ತ ಗೋಕಾಕ  ತಾಲೂಕಿನಲ್ಲೂ ಕೂಡ ಯೋಜನೆಗೆ  ರವಿವಾರದಂದು ಚಾಲನೆ ನೀಡಲಾಯಿತು.
ಗೋಕಾಕ  ತಾಲೂಕು ಕೇಂದ್ರದಲ್ಲಿ ರವಿವಾರದಂದು  ಶಕ್ತಿ ಯೋಜನೆಗೆ  ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ  ಅವರು ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ  ಉಚಿತ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿದರು.
ಇದು ಸರ್ಕಾರದ ಕಾರ್ಯಕ್ರಮ ಆಗಿರೋದ್ರಿಂದ ಗೋಕಾಕ ಹಾಲಿ  ಶಾಸಕ ರಮೇಶ್ ಜಾರಕಿಹೊಳಿ  ಅವರಿಗೂ ಆಹ್ವಾನ ನೀಡಲಾಗಿತ್ತು, ಆದರೆ ಅವರು ಕಾರ್ಯಕ್ರಮಕ್ಕೆ ಬಾರದೇ ಗೈರು ಹಾಜರಾಗಿದ್ದಾರೆ.
ಬಳಿಕ ಮಾತನಾಡಿದ ಅವರು, ಈ ಯೋಜನೆ ಯಶಸ್ವಿಯಾಗಲಿ, ಮಹಿಳೆಯರೆಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಿ  ಎಂದರು.

Related posts: