RNI NO. KARKAN/2006/27779|Sunday, February 1, 2026
You are here: Home » breaking news » ಗೋಕಾಕ:ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿ ಮನವೊಲಿಸಲು ಯತ್ನ ಕಾಂಗ್ರೆಸ್ ನಾಯಕರ ಹರಸಾಹಸ

ಗೋಕಾಕ:ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿ ಮನವೊಲಿಸಲು ಯತ್ನ ಕಾಂಗ್ರೆಸ್ ನಾಯಕರ ಹರಸಾಹಸ 

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿ ಮನವೊಲಿಸಲು ಯತ್ನ ಕಾಂಗ್ರೆಸ್ ನಾಯಕರ ಹರಸಾಹಸ

ಗೋಕಾಕ ಏ 20 : ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿ ಮನವಲಿಸಲು ನಾಮಪತ್ರ ಕೊನೆಯ ದಿನವಾದ ಗುರುವಾರದಂದು ನಗರದ ಅಶೋಕ ಪೂಜಾರಿ ಅವರ ನಿವಾಸಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಅಶೋಕ ಪೂಜಾರಿ ಅವರ ಮನವಲಿಸಲು ಹರಸಾಹಸ ಪಡುತ್ತಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕಡಾಡಿ ಆಗಮಿಸಿ ಅಶೋಕ ಪೂಜಾರಿ ಅವರ ಮನವಲಿಸಿದ್ದು, ಅಶೋಕ ಪೂಜಾರಿ ಅವರುತನ್ನ ಯಾವುದೇ ಸ್ವಷ್ಟ ನಿಲುವು ವ್ಯಕ್ತಪಡಿಸಿಲ್ಲ

ಮಾಜಿ ಶಾಸಕ ಅಶೋಕ್ ಪಟ್ಟಣ ಅವರು ಸಹ ಪೂಜಾರಿ ಅವರ ಮನೆಗೆ ಭೇಟಿ ಮಾತುಕತೆ ನಡೆಸಿದ್ದಾರೆ. ಇನ್ನು ಅನೇಕ ನಾಯಕರು ಭೇಟಿನೀಡುವ ಸಾಧ್ಯತೆಗಳಿವೆ. ಒಟ್ಟಾರೆ ಇಂಜು ಮಧ್ಯಾಹ್ನ 3 ಘಂಟೆಗೆ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ನಾಯಕರ ಮನವಲಿಕೆಗೆ ಬಂಡಾಯ ಅಭ್ಯರ್ಥಿ ಅಶೋಕ್ ಮನೆಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Related posts: