ಗೋಕಾಕ:ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ .ಪಾತ್ರೋಟ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ .ಪಾತ್ರೋಟ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಗೋಕಾಕ ಎ 1 : ನಗರದಲ್ಲಿ ಈ ಹಿಂದೆ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಈಗ ಬೈಲಹೊಂಗಲ ಸಾಮಾಜಿಕ ಉಪ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಎಂ.ಕೆ. ಪಾತ್ರೋಟ ಅವರ ಬೀಳ್ಕೊಡುಗೆ ಸಮಾರಂಭವನ್ನು ಇಲ್ಲಿನ ಸಾಮಾಜಿಕ ಅರಣ್ಯ ವಲಯದ ಕಛೇರಿಯಲ್ಲಿ ಶನಿವಾರದಂದು ನಡೆಸಲಾಯಿತು. ಗೋಕಾಕ ತಾಲೂಕಿನ ಗೋಕಾಕ ಪಾಲ್ಸ್ ನಿವಾಸಿಗಳಾದ ಇವರು ನಾಗರಗಾಳಿ, ಜಾಬೊಂಟಿ, ಕುಂಬಾರವಾಡಾ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಸೇವೆಯನ್ನು ಸಲ್ಲಿಸಿದ್ದು ಮಾ31 ರಂದು ತಮ್ಮ ಸೇವೆಯಿಂದ ನಿವೃತ್ತಿಗೊಂಡರು.
ಬೀಳ್ಕೊಡುಗೆ ಸಮಾರಂಭಕ್ಕೆ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಹಲವಾರು ಸಂಖ್ಯೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡು ಅವರು ಕರ್ತವ್ಯ ನಿರ್ವಹಿಸಿದ ಕುರಿತು ಮತ್ತು ಅವರೊಂದಿಗೆ ಸೇವೆ ಸಲ್ಲಿಸಿದ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಸಂಜೀವ ಸವಸುದ್ದಿ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ.ಪಾತ್ರೋಟ ಅವರು ಕರ್ತವ್ಯದ ಜೊತೆಗೆ ತಮ್ಮ ಸಹ ಅಧಿಕಾರಿ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದ ಒಬ್ಬ ಸ್ನೇಹಜೀವಿ ಅಧಿಕಾರಿಯಾಗಿದ್ದರು. ದಟ್ಟ ಅರಣ್ಯ ವಲಯದಲ್ಲಿ ಕಾರ್ಯನಿರ್ವಸುವಾಗ ಮರಗಳ್ಳರಿಗೆ ಆಸ್ಪದ ನೀಡದೇ ಯಾವುದೇ ಹೊಂದಾಣಿಕೆ ಇಲ್ಲದೇ ಎಂತಹ ಒತ್ತಡ ಇದ್ದರೂ ಸಹ ಅದಕ್ಕೆ ಜಗ್ಗದೇ ಕರ್ತವ್ಯ ನಿರ್ವಹಿಸಿದ್ದನ್ನು ಪ್ರಶಂಸಿಸಿದರು. ಜನರ ಸಹಕಾರದಿಂದಲೇ ಗೋಕಾಕ ಸೇರಿದಂತೆ ಅನೇಕ ಪ್ರದೇಶದಲ್ಲಿ ಟ್ರೀಪಾರ್ಕಗಳನ್ನು ನಿರ್ಮಿಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದರು. ಅರಣ್ಯ ಇಲಾಖೆಯಲ್ಲಿ ರಾಜಕೀಯ ಒತ್ತಡಗಳ ಮಧ್ಯೆಯೂ ಜನರ ಸಮಸ್ಯೆಗಳಿಗೆ ಸ್ವಂದಿಸಿ ಉತ್ತಮ ಕಾರ್ಯಮಾಡುವ ಜೊತೆಗೆ ಇಲಾಖೆಯ ಇತಿಮಿತಿಯಲ್ಲಿ ಕಾರ್ಯನಿರ್ವಹಿಸಿ ಒಬ್ಬ ದಕ್ಷ ಅಧಿಕಾರಿ ಎಂದು ಜನಜನಿತರಾಗಿದ್ದ ಪಾತ್ರೋಟ ಅವರು ಹಸಿರು ಗೋಕಾಕಕ್ಕಾಗಿ ಒಂದು ದಿನ ಎಂಬ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಾಯ,ಸಹಕಾರ ನೀಡಿ ಒಂದೇ ದಿನ 25 ಸಾವಿರ ಗಿಡಗಳನ್ನು ನೆಡಲು ಸಹಕರಿಸಿದ್ದರು. ಇವರು ಇಲಾಖೆಯಿಂದ ನಿವೃತ್ತಿಯಾಗಿದ್ದರು ಸಹ ಭಾವನಾತ್ಮಕವಾಗಿ ನಮ್ಮ ಜೊತೆಗೆ ಇರುತ್ತಾರೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ಇಲಾಖೆಯ ಎಲ್ಲಾ ಸ್ಥರದ ಅಧಿಕಾರಿಗಳನ್ನು ಸ್ನೇಹಿತರಂತೆ ನಡೆಸಿಕೊಂಡು ಒಳ್ಳೆಯ ಮಾರ್ಗದರ್ಶನ ಮಾಡಿದ್ದಾರೆ ಎಂದು ಎಂ.ಕೆ.ಪಾತ್ರೋಟ ಅವರ ಸೇವಾ ಅವಧಿಯನ್ನು ನೆನೆದು ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಕರವೇ ತಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹಾರೈಸಿದರು.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಿವಿಧ ಸ್ಥರದ ಅಧಿಕಾರಿಗಳು, ಸಿಬ್ಬಂದಿಗಳು, ಕರವೇ, ಜಯ ಕರ್ನಾಟಕ ಸಂಘಟನೆಯ ಸದಸ್ಯರು ಎಂ.ಕೆ.ಪಾತ್ರೋಟ ಅವರನ್ನು ಸತ್ಕರಿಸಿ,ಗೌರವಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಲಯದ ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಜಾನ ತಲವಾರ, ಪತ್ರಕರ್ತ ಸಾದಿಕ ಹಲ್ಯಾಳ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಅಜೀಜ್ ಮೋಕಾಶಿ, ಮುಗುಟ ಪೈಲವಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.