ಗೋಕಾಕ:ಸಾಧನೆಗೆ , ಸಿದ್ದಿಗೆ ಬಡತನ ಅಡ್ಡಿ ಬರುವುದಿಲ್ಲ : ಐಎಎಸ್ ಅಧಿಕಾರಿ ಮಹಾಂತೇಶ ಬಿಳಗಿ

ಸಾಧನೆಗೆ , ಸಿದ್ದಿಗೆ ಬಡತನ ಅಡ್ಡಿ ಬರುವುದಿಲ್ಲ : ಐಎಎಸ್ ಅಧಿಕಾರಿ ಮಹಾಂತೇಶ ಬಿಳಗಿ
ಗೋಕಾಕ ಮಾ 4 : ಸಾಧನೆಗೆ , ಸಿದ್ದಿಗೆ ಬಡತನ ಅಡ್ಡಿ ಬರುವುದಿಲ್ಲ ಎಂದು ಐಎಎಸ್ ಅಧಿಕಾರಿ ಮಹಾಂತೇಶ ಬಿಳಗಿ ಹೇಳಿದರು.
ಶನಿವಾರದಂದು ನಗರದಲ್ಲಿ ನಡೆಯುತ್ತಿರುವ 18ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲು ಗೋಕಾಕ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಬಿಸಿಎ ಕಾಲೇಜು ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
ಕನಸು ಗಟ್ಟಿಯಾಗಿ ಇದ್ಧರೆ ದಾರಿ ತನ್ನಿಂದ ತಾನೆ ತರೆದುಕೊಳ್ಳುತ್ತದೆ. ಐಎಎಸ್ ಮಕ್ಕಳು , ಐಎಎಸ್ ಆಗುತ್ತಾರೆ, ಪೊಲೀಸ್ ಅಧಿಕಾರಿಗಳ ಮಕ್ಕಳ ಪೊಲೀಸ್ ಅಧಿಕಾರಿಗಳು ಆಗುತ್ತಾರೆ ಅದು ಸುಳ್ಳು, ಆದರೆ ರಾಜಕೀಯ ಮಕ್ಕಳ ರಾಜಕಾರಣಿಗಳು ಆಗುತ್ತಾರೆ ಇಲ್ಲಿ ಅದು ಇಲ್ಲ ಎಂದ ಅವರು ಮನುಷ್ಯ ಮಾತನಾಡ ಬಾರದು ಅವನ ಕೆಲಸ ಮಾತನಾಡಬೇಕು ಎಂದು ನಂಬಿ ಕಾರ್ಯ ಮಾಡಿದರೆ ಸಾಧಿಸಲು ಸಾಧ್ಯ. ಜೀವನದಲ್ಲಿ ನುಡಿದಂಗೆ ನಡಿದರೆ ಮಾತ್ರ ಒಳ್ಳೆಯ ಸಾಧಕರಾಗುತ್ತಾರೆ. ಅಧಿಕಾರದಲ್ಲಿ ಇದ್ದಾಗ ಸಾರ್ವಜನಿಕರಿಗೆ ,ರೈತರಿಗೆ ಸ್ವಂದಿಸಿ ಕಾರ್ಯ ಮಾಡಿ ಒಳ್ಳೆಯ ಅಧಿಕಾರ ಎಂದು ಅನಿಸಿಕೊಳ್ಳಬಹುದು.ವ್ಯವಸ್ಥೆ ಬದಲಾಗಲಿ ಎಂದು ಹಪಿಹಪಿಸದೆ ಮೊದಲು ತಾನು ಬದಲಾಗಬೇಕು ಆಗ ಜಗತ್ತು ಬದಲಾಗುತ್ತದೆ .ಸಾರ್ವಜನಿಕ ಸೇವೆಗೆ ಬಂದಾಗ ಪಾರದರ್ಶಕತೆ ಇರಬೇಕು. ಸಾರ್ವಜನಿಕರು ಉನ್ನತ ಅಧಿಕಾರಿಗಳಿಗೆ ಗೌರವ ನೀಡುತ್ತಾರೆ. ಒಬ್ಬ ಅಧಿಕಾರಿಗೆ ಮನಸ್ಸು ಮಾಡಿದರೆ ಏನು ಬೇಕಾದರು ಮಾಡಲು ಸಾಧ್ಯ. ಸರಕಾರಿ ಸೇವೆಯ ಜೊತೆಗೆ ವಯಕ್ತಿಕ ಜೀವನದಲ್ಲಿಯೂ ಜನರು ಮೆಚ್ಚುವ ಹಾಗೆ ಜೀವನ ನಡೆಸಬೇಕು ಎಂದ ಅವರು ತಗೆದುಕೊಳ್ಳುವವರು ಇರುವವರೆಗೆ ಕೊಡುವವರು ಇರುತ್ತಾರೆ. ಯುವ ಮನಸುಗಳಲ್ಲಿ ಕನಸುಗಳು ಬಿತ್ತಿ ಅವುಗಳನ್ನು ಸಕಾರಗೊಳಿಸುವಲ್ಲಿ ನಾವು ಪ್ರಯತ್ನಮಾಡಬೇಕು ಎಂದು ಮಹಾಂತೇಶ ಬಿಳಗಿ ಹೇಳಿದರು .
ಅರ್ಪನಾ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಆಡಳಿತಾಧಿಕಾರಿ ಅಡಿವೇಶ ಗವಿಮಠ, ದ್ರಾಕ್ಷಾಯನಿ ಮಠಪತಿ, ಜಗದೀಶ್ ಮುತ್ತನಾಳ ಉಪಸ್ಥಿತರಿದ್ದರು