RNI NO. KARKAN/2006/27779|Tuesday, May 21, 2024
You are here: Home » breaking news » ಗೋಕಾಕ:ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ಗೋಕಾಕ:ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟಿಸಿದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ 

ಕ್ಲಸ್ಟರ್ ಮಟ್ಟದ  ಕಲಿಕಾ ಹಬ್ಬವನ್ನು  ಉದ್ಘಾಟಿಸಿದ  ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ

ಗೋಕಾಕ ಜ 24 :  ಶಾಲೆಗಳಲ್ಲಿ ವಿದ್ಯಾಭ್ಯಾಸ ನೀಡುವ ಜೊತೆಗೆ ಮಕ್ಕಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪಠ್ಯೇತರ ಚಟುವಟಿಕೆಗಳು ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ‌.ಬಿ.ಬಳಗಾರ  ಹೇಳಿದರು.
ಮಂಗಳವಾರದಂದು ನಗರದ ಎಂ.ಎಚ್ ಹೈಸ್ಕೂಲ್ ಆವರಣದಲ್ಲಿ  ಕರ್ನಾಟಕ ಸರಕಾರ ಜಿಲ್ಲಾ ಪಂಚಾಯಿತಿ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗೋಕಾಕ ದಕ್ಷಿಣ ವಲಯದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದರ ಜತೆಗೆ ಸಂಭ್ರಮದಿಂದ ಕಲಿಕೆಗೆ ಮಾರ್ಗದರ್ಶನ ನೀಡುವ ಕಲಿಕಾ ಹಬ್ಬ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೆಚ್ಚುಸುವಲ್ಲಿ ಸಹಕಾರಿಯಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಶಾಲಾ ಮಕ್ಕಳ ಉತ್ತಮ ಸಾಧಕರಾಗುತ್ತಾರೆ‌.   ಪಠ್ಯ ಕಲಿಕೆಗೆ ನಿರಾಸಕ್ತಿ ತೋರುವ ಮಕ್ಕಳಲ್ಲಿ ಸಡಗರದಿಂದ ಕಲಿಯಲು ಆಸಕ್ತಿ ಹೆಚ್ಚಿಸಲು ಪ್ರೋತ್ಸಾಹ ನೀಡುವಲ್ಲಿ ಯಶಸ್ವಿಯಾಗಿದ್ದು, ಮಕ್ಕಳಲ್ಲಿ ಜೀವನ ಕೌಶಲ್ಯ ವೃದ್ದಿಗೂ ಕಲಿಕಾ ಹಬ್ಬ  ಸಹಕಾರಿಯಾಗಿದೆ ಎಂದು ತಿಳಿಸಿದರು.
ಗೋಕಾಕ ದಕ್ಷಿಣ ವಲಯದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ,
ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್. ಎಂ ದೇಶಪಾಂಡೆ, ಉಪ ಪ್ರಾಚಾರ್ಯ ಎಂ.ಬಿ.ಬಳಗಾರ,  ಸಂಪನ್ಮೂಲ ಅಧಿಕಾರಿ ಎಂ.ಬಿ.ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ವಾಯ್.ಎಲ್.ತೋರಣಗಟ್ಟಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಎಸ್.ಡಿ.ಎಂ ಸಿ. ಅಧ್ಯಕ್ಷ ಸಿದ್ದಪ್ಪ ಹುಚ್ಚರಾಯಪ್ಪಗೋಳ, ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ,  ಬಾಬು ಮುಳಗುಂದ, ಸಂತೋಷ ಮಂತ್ರಣವರ, ಯೂಸುಫ್ ಅಂಕಲಗಿ, ಶ್ರೀಶೈಲ ಪೂಜೇರಿ, ಹಣುಮಂತ ಕಾಳಂಗುಡ್ಡಿ,  ಗುಡ್ಡಾಕರ, ಹರೀಶ ಬೂದಿಹಾಳ,ಮುಖಂಡರಾದ ದುರ್ಗಪ್ಪ ಶಾಸ್ತ್ರಿ ಗೋಲ್ಲರ , ಅಬ್ದುಲ್ ಶಾಬಾಶಖಾನ, ಬಸವರಾಜ ಮಾಳಗಿ, ಬಸವರಾಜ ದೇಶನೂರ,  ವಿಶ್ವನಾಥ್ ಬಿಳ್ಳೂರ ಉಪಸ್ಥಿತರಿದ್ದರು .
ಕಾರ್ಯಕ್ರಮವನ್ನು ಶಿಕ್ಷಕ ಟಿ.ಬಿ.ಬಿಲ್ ನಿರೂಪಿಸಿ, ವಂದಿಸಿದರು

Related posts: