ಗೋಕಾಕ:ದೈಹಿಕ ಸಾಮರ್ಥ್ಯ ಹೆಚ್ಚಳ ಮತ್ತು ಬೌದ್ಧಿಕ ಮಟ್ಟ ವೃದ್ಧಿಗೆ ಕ್ರೀಡೆ ಪೂರಕವಾಗಿದೆ : ಮುರುಘರಾಜೇಂದ್ರ ಶ್ರೀ

ದೈಹಿಕ ಸಾಮರ್ಥ್ಯ ಹೆಚ್ಚಳ ಮತ್ತು ಬೌದ್ಧಿಕ ಮಟ್ಟ ವೃದ್ಧಿಗೆ ಕ್ರೀಡೆ ಪೂರಕವಾಗಿದೆ : ಮುರುಘರಾಜೇಂದ್ರ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :
ದೈಹಿಕ ಸಾಮರ್ಥ್ಯ ಹೆಚ್ಚಳ ಮತ್ತು ಬೌದ್ಧಿಕ ಮಟ್ಟ ವೃದ್ಧಿಗೆ ಕ್ರೀಡೆ ಪೂರಕವಾಗಿದೆ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ನಗರದ ಚೆನ್ನಬಸವೇಶ್ವರ ಕಾಲೇಜು ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಮತ್ತು ಚೆನ್ನಬಸವೇಶ್ವರ ವಿದ್ಯಾಪೀಠ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನತೆ ಕ್ರೀಡೆಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳುವುದು ಅವಶ್ಯವಿದೆ.ಮಾನಸಿಕವಾಗಿ, ಧೈಹಿಕವಾಗಿ ಸದೃಢರಾಗಿರಲು ಕ್ರೀಡೆಗಳ ಪಾತ್ರ ಮಹತ್ವದಾಗಿದೆ. ಹೀಗಾಗಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು.ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ. ಯುವ ಜನತೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ. ಕ್ರೀಡಗಳಲ್ಲಿ ಭಾಗವಹಿಸಿದಾಗ ಆರೋಗ್ಯವಂತರಾಗಿರಬಹುದು . ಇವತ್ತಿನ ಆಧುನಿಕ ಯುಗದಲ್ಲಿ ಮಾಯವಾಗುತ್ತಿರುವ ದೇಶಿಯ ಕ್ರೀಡೆಗಳನ್ನು ಉಳಿಸಿ, ಬೆಳೆಸುವ ಕಡೆ ಸರಕಾರ ಗಮನ ಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ಜಿಲ್ಲಾ ಪರಿವಿಕ್ಷಕ ಜೋಗಳೇಕರ, ಎಲ್.ಕೆ ತೊರಣಗಟ್ಟಿ, ಎನ್.ಬಿ.ಹಿರೇಮಠ,ಎಸ್.ಬಿ ಹಳಿಗೌಡರ, ಆರ್.ಬಿ.ಮಾವಿನಗಿಡದ, ಎಸ್.ಕೆ ಹುಲ್ಯಾಳ, ಸಿ.ಎಸ್.ಬರಗಾಲಿ, ಎಸ್.ಎ ನಾಯಕ, ಶ್ರೀಮತಿ ಬಾಗೆನ್ನವರ,ಆರ್.ಬಿ.ವಜ್ರಮಟ್ಟಿ,ಜೆ.ಸಿ.ಹಿರೇಮಠ, ಎಂ.ಎಲ್.ಪಾಗದ, ಪಿ.ಬಿ.ಮದಗುಣಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.