ಗೋಕಾಕ:ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮ ದಿನಾಚರಣೆ ಅಂಗವಾಗಿ ಹಣ್ಣು ಹಂಪಲು ವಿತರಣೆ

ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮ ದಿನಾಚರಣೆ ಅಂಗವಾಗಿ ಹಣ್ಣು ಹಂಪಲು ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಸೆ 17
ಪ್ರಧಾನಿ ನರೇಂದ್ರ ಮೋದಿಯವರ 72ನೇ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದಿಂದ ಸೇವಾ ಪಾಕ್ಷಿಕ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಗೂ ಶಿವಾ ಫೌಂಡೇಶನ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವ ನಾಯಕ, ಕೆಎಮ್‍ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ಬಿಜೆಪಿ ಮುಖಂಡರುಗಳಾದ ಶಾಮಾನಂದ ಪೂಜೇರಿ, ಶಕೀಲ ಧಾರವಾಡಕರ, ಚಿದಾನಂದ ದೇಮಶೆಟ್ಟಿ, ಲಕ್ಕಪ್ಪ ತಹಶೀಲದಾರ, ಪ್ರಮೋದ ಜೋಶಿ, ಲಕ್ಷ್ಮಣ ತಳ್ಳಿ, ಯುವ ಮೋರ್ಚಾ ಪದಾಧಿಕಾರಿಗಳಾದ ಆನಂದ ಅತ್ತುಗೋಳ, ವಿರೇಂದ್ರ ಎಕ್ಕೇರಿಮಠ, ಅಶೋಕ ಸಣ್ಣಶೆಟ್ಟಿ, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ರಾಜೇಶ್ವರಿ ಒಡೆಯರ, ರೇಣುಕಾ ಚೌಗಲಾ, ಮಂಜುಳಾ ಗೋರಗುದ್ದಿ, ಶ್ರೀದೇವಿ ತಡಕೋಡ, ಸವಿತಾ ಪಾಟೀಲ, ಗೀತಾ ಕಂಬಾರ, ಪಾರ್ವತಿ ಹಳ್ಳೂರ, ವಿಜಯಲಕ್ಷ್ಮೀ ಬಿಜಾಪೂರೆ, ಸವಿತಾ ಪಟ್ಟಣಶೆಟ್ಟಿ, ಮಾಲತಿ ಪಟ್ಟಣಶೆಟ್ಟಿ, ರತ್ನಾ ಪೂಜೇರಿ, ಶಾಲಾಬಾಯಿ ಕೌಜಲಗಿ, ಭಾರತಿ ಅಂಗಡಿ, ಸೇರಿದಂತೆ ಅನೇಕರು ಇದ್ದರು.