ಗೋಕಾಕ:ನೀಟ್ ಪರೀಕ್ಷೆಯಲ್ಲಿ ಹಿರೇನಂದಿ ಗ್ರಾಮದ ರಮೇಶ ಬಡಕಪ್ಪ ಪೂಜೇರಿ ಸಾಧನೆ

ನೀಟ್ ಪರೀಕ್ಷೆಯಲ್ಲಿ ಹಿರೇನಂದಿ ಗ್ರಾಮದ ರಮೇಶ ಬಡಕಪ್ಪ ಪೂಜೇರಿ ಸಾಧನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 8 :
ವೈದ್ಯಕೀಯ ಅರ್ಹತಾ ಪರೀಕ್ಷೆ(ನೀಟ್)ಯಲ್ಲಿ ತಾಲೂಕಿನ ಹಿರೇನಂದಿ ಗ್ರಾಮದ ರಮೇಶ ಬಡಕಪ್ಪ ಪೂಜೇರಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ ಅವರು 645 ಅಂಕ ಪಡೆದುಕೊಂಡು, 1861ನೇ ಯಾರ್ಂಕ್ ಪಡೆಯುವ ಮೂಲಕ ಗೋಕಾಕ ತಾಲೂಕು ಹಾಗೂ ಹಿರೇನಂದಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ರಮೇಶ ಅವರು ಬೆಂಗಳೂರು ಪರಿಶ್ರಮ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡಿದ್ದರು. ಅವರು ಹಿರೇನಂದಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರೂ ಆಗಿರುವ ಬಡಕಪ್ಪ ಪೂಜೇರಿ ಅವರ ಸುಪುತ್ರ.