RNI NO. KARKAN/2006/27779|Monday, August 8, 2022
You are here: Home » breaking news » ಗೋಕಾಕ:75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಜಯಂತೋತ್ಸವ ಪ್ರಚಾರಾರ್ಥ ಬಿತ್ತಿಪತ್ರ ಬಿಡುಗಡೆ

ಗೋಕಾಕ:75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಜಯಂತೋತ್ಸವ ಪ್ರಚಾರಾರ್ಥ ಬಿತ್ತಿಪತ್ರ ಬಿಡುಗಡೆ 

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಜಯಂತೋತ್ಸವ ಪ್ರಚಾರಾರ್ಥ ಬಿತ್ತಿಪತ್ರ ಬಿಡುಗಡೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 5 :
ಸಂಗೋಳ್ಳಿ ರಾಯಣ್ಣ ಯುವ ಪಡೆ ಗೋಕಾಕ ಇವರ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಬಿತ್ತಿಪತ್ರಗಳನ್ನು ಗುರುವಾರದಂದು ನಗರದ ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ದಿ. 16 ರಂದು ಸಾಯಂಕಾಲ 4 ಗಂಟೆಗೆ ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಕೊಳವಿ ಹನುಮಾನ ದೇವಸ್ಥಾನದ ವರೆಗೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿಯ ಬೃಹತ್ ಶೋಭಾಯಾತ್ರೆ ಜರುಗಲಿದೆ. ನಂತರ ರಾತ್ರಿ 8 ಗಂಟೆಗೆ ಜೀ ಕನ್ನಡ ಚಾನಲ್‍ನ ಹಾಸ್ಯ ಕಲಾವಿದರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಈ ಸಂದರ್ಭದಲ್ಲಿ ಸಂಗೋಳ್ಳಿ ರಾಯಣ್ಣ ಯುವ ಪಡೆಯ ಅನೀಲ ತುರಾಯಿದಾರ, ಸಂತೋಷ ಕಟ್ಟಿಕಾರ, ಆನಂದ ಉಳ್ಳಾಗಡ್ಡಿ, ಸುರೇಶ ಉಳ್ಳಾಗಡ್ಡಿ, ಮಹಾಂತೇಶ ಕರಿಗಾರ, ಮಾನಿಂಗ ಪೂಜೇರಿ, ವಿಠ್ಠಲ ಕರಿಗಾರ, ಮಹಾದೇವ ಓಜಪ್ಪಗೋಳ ಸೇರಿದಂತೆ ಅನೇಕರು ಇದ್ದರು.

Related posts: