ಘಟಪ್ರಭಾ:ಓಪನ ಕಬಡ್ಡಿ ಪಂದ್ಯಾವಳಿ ವಿಷ್ನು ಟಾಯಿಗರ್ಸ್ ತಂಡಕ್ಕೆ ಜಯ
ಓಪನ ಕಬಡ್ಡಿ ಪಂದ್ಯಾವಳಿ ವಿಷ್ನು ಟಾಯಿಗರ್ಸ್ ತಂಡಕ್ಕೆ ಜಯ
ಘಟಪ್ರಭಾ ಅ 2: ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ಯವಾಗಿ ಪ್ರಥಮ ಬಾರಿಗೆ ಶ್ರೀ ವರಮಹಾಲಕ್ಷ್ಮೀ ಸ್ಪೋಟ್ರ್ಸ ಕ್ಲಬ್ ವತಿಯಿಂದ ಅಂತರ ರಾಜ್ಯ ಮಟ್ಟದ ಮ್ಯಾಟ್ ಮೇಲಿನ ಓಪನ ಕಬ್ಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.
ಉದ್ಘಾಟಣಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಇಲ್ಲಿಯ ಗುಬ್ಬಲಗುಡ್ಡ ಕೆಂಪಯ್ಯಾಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿ ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ನಾವು ಆರೋಗ್ಯವಂತವಾಗಿ ಉಳಿಯಬಹದು. ಎಲ್ಲರು ಯಾವುದಾದರು ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಪಂದ್ಯಾವಳಿಯನ್ನು ಪ.ಪಂ ಸದಸ್ಯ ಹಾಗೂ ನ್ಯಾಯವಾದಿ ಗಂಗಾಧರ ಬಡಕುಂದ್ರಿ ಉದ್ಘಾಟಿಸಿದರು.
ವೇದಿಕೆ ಮೇಲೆ ಹಿರಿಯರಾದ ಸುಭಾಸ ಹುಕ್ಕೇರಿ, ಅಪ್ಪಯ್ಯಾ ಬಡಕುಂದ್ರಿ, ಮಾರುತಿ ಹುಕ್ಕೇರಿ, ಡಿ.ಎಂ.ದಳವಾಯಿ, ಎಂ.ಜಿ.ಮುಚಳಂಬಿ, ಬಾಳಪ್ಪಾ ಬಡಾಯಿ, ಹಾಲಪ್ಪಾ ನಿಡಸೂಸಿ, ಮಲ್ಲಪ್ಪಾ ತುಕ್ಕಾನಟ್ಟಿ, ಈರಣ್ಣಾ ಸಂಗಮನವರ, ಶೇಖರ ಕುಲಗೋಡ, ಶಿವುಪುತ್ರ ಕೊಗನೂರ ಉಪಸ್ಥಿರಿದ್ದರು.
ಪ್ರಥಮ ಬಹುಮಾಣವನ್ನು ವಿಷ್ನು ಟಾಯಿಗರ್ಸ್ ತಂಡ ಮಲ್ಲಾಪೂರ ಪಿ.ಜಿ ಹಾಗೂ ದ್ವಿತೀಯ ಬಹುಮಾನವನ್ನು ಸಾಂಗ್ಲಿ ಸ್ಪೋಟ್ರ್ಸ ಕ್ಲಬ ಇವರು ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾಣ ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮೀ ಸ್ಪೋಟ್ರ್ಸ ಕ್ಲಬ್‍ದ ವ್ಯವಸ್ಥಾಪಕರಾದ ರಾಜು ಶಿಂಗಾರಿ, ಮಲ್ಲಪ್ಪಾ ಶಿಂದ್ರಿ, ಸದಸ್ಯರಾದ ಕುಮಾರ ಹುಕ್ಕೇರಿ, ಶಂಕರ ನಾಯಿಕ, ಸುಭಾಷ ಕೊಂಕಣಿ, ಶಿದ್ಲಿಂಗ ನಾಯಕ, ನಾಗು ನಾಯಿಕ, ಶಿವು ಕೊಂಕಣಿ, ವಿಠ್ಠಲ ನಾಯಿಕ, ಮುತ್ತು ಯಮಕನಮರಡಿ, ವಿನಾಯಕ ಪಾಟೀಲ, ರಾಜು ಎಮ್ಮಿ, ಬಸವರಾಜ ಕಾಡದವರ, ಸತೀಶ ದರೆಪಗೋಳ, ಪ್ರಕಾಶ ಬಿರನಾಳೆ, ಯಲ್ಲಪ್ಪಾ ಕಪರಟ್ಟಿ ಸೇರಿದಂತೆ ಅನೇಕರು ಉಪಸ್ಥಿರಿದ್ದರು.