RNI NO. KARKAN/2006/27779|Saturday, April 20, 2024
You are here: Home » breaking news » ಗೋಕಾಕ:ಸರ್ಕಾರಿ ಕನ್ನಡ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ : ವಿಠಲ ಕೋಣಿ

ಗೋಕಾಕ:ಸರ್ಕಾರಿ ಕನ್ನಡ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ : ವಿಠಲ ಕೋಣಿ 

ಸರ್ಕಾರಿ ಕನ್ನಡ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ : ವಿಠಲ ಕೋಣಿ

ಬೆಟಗೇರಿ ಅ 4 : ಗ್ರಾಮೀಣ ವಲಯದ ಸರ್ಕಾರಿ ಕನ್ನಡ ಶಾಲೆಗಳು ಪ್ರಗತಿ ಸಾಧಿಸಲು ಸ್ಥಳೀಯರ ಸಹಾಯ, ಸಹಕಾರ ಅವಶ್ಯಕ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪತ್ರೇಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ವಿಠಲ ಕೋಣಿ ಹೇಳಿದರು.
ಗ್ರಾಮದ ಪತ್ರೇಪ್ಪನ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶನಿವಾರ ಆ.4ರಂದು ಆಯೋಜಿಸಿದ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಭಾಷೆ, ಕಲೆ, ಸಂಸ್ಕøತಿ, ಸಂಪ್ರದಾಯ ಹಾಗೂ ಕನ್ನಡ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕು ಎಂದರು.
ಸ್ಥಳೀಯ ಶಿಕ್ಷಣಪ್ರೇಮಿ ರವಿ ಉಪ್ಪಾರ ಮುಖ್ಯತಿಥಿಗಳಾಗಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ, ವಿವಿಧ ಯೋಜನೆಗಳ ಮೂಲಕ ಸರ್ಕಾರ ಶಾಲೆಯ ಮಕ್ಕಳಿಗೆ ನೀಡುತ್ತಿರುವ ಹಲವು ಸೌಲಭ್ಯಗಳ ಕುರಿತು ತಿಳಿಸಿದ ಬಳಿಕ ಶಾಲೆಯ ಎಲ್ಲ ತರಗತಿಯ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಬಿ.ಎ.ಕೋಟಿ, ಹನುಮಂತ ಸೂಲನ್ನವರ, ಪ್ರಕಾಶ ಹಾಲಣ್ಣವರ, ನಾಗಪ್ಪ ಕೋಣಿ, ಅಡಿವೆಪ್ಪ ಜೋಗಿ, ಕಲ್ಲಪ್ಪ ಸವತಿಕಾಯಿ, ಯಲ್ಲಪ್ಪ ಸವತಿಕಾಯಿ, ಯಮನಪ್ಪ ಕೋಣಿ ಸೇರಿದಂತೆ ಎಸ್‍ಡಿಎಮ್‍ಸಿ ಸದಸ್ಯರು, ಶಿಕ್ಷಣಪ್ರೇಮಿಗಳು, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.
ಶಿಕ್ಷಕ ಎಚ್.ವೈ.ಕಟ್ಟಿಮನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್.ಜಿ.ಮಠಪತಿ ಕೊನೆಗೆ ವಂದಿಸಿದರು.

Related posts: