RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜನತೆ ಸಂಘಟಿತರಾಗಿ ಸಹಕರಿಸಿ : ಶಾಸಕ ರಮೇಶ

ಗೋಕಾಕ:ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜನತೆ ಸಂಘಟಿತರಾಗಿ ಸಹಕರಿಸಿ : ಶಾಸಕ ರಮೇಶ 

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜನತೆ ಸಂಘಟಿತರಾಗಿ ಸಹಕರಿಸಿ : ಶಾಸಕ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 19 :

 

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜನತೆ ಸಂಘಟಿತರಾಗಿ ಸಹಕರಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ನಗರದ ಶಾಸಕರ ಕಾರ್ಯಾಲಯದಲ್ಲಿ ಕುಂದರಗಿ, ಗುಜನಾಳ ಹಾಗೂ ಮದವಾಲ ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆಗೊಂಡ ಹಿನ್ನಲೆಯಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಂಘಟನೆಯಿಂದ ಅಭಿವೃದ್ಧಿ ಸಾಧ್ಯ. ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಬೇಕು. ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಶ್ರಮಿಸಲಾಗುತ್ತಿದೆ. ಜನತೆ ಇವುಗಳ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಪಂ ಅಧ್ಯಕ್ಷರುಗಳಾದ ಅರಬವ್ವ ಹರಿಜನ, ಮಾರುತಿ ಆಲೂರ, ಲಕ್ಷ್ಮೀಬಾಯಿ ಗಸ್ತಿ, ಉಪಾಧ್ಯಕ್ಷರುಗಳಾದ ಯಮನವ್ವ ಪೂಜೇರಿ, ಯಲ್ಲವ್ವ ಕರಡಿಗುದ್ದಿ, ರೇಣುಕಾ ಹರಿಜನ, ಮುಖಂಡರುಗಳಾದ ಟಿ ಆರ್ ಕಾಗಲ, ಭೀಮಗೌಡ ಪೋಲಿಸಗೌಡ್ರ, ಅಡಿವೆಪ್ಪ ನಾವಲಗಟ್ಟಿ ಸೇರಿದಂತೆ ಅನೇಕರು ಇದ್ದರು.

Related posts: