ಘಟಪ್ರಭಾ:ನಿಯಮಿತವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ನಿಯಮಿತವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ
ಘಟಪ್ರಭಾ ಫೆ 12: ನಿಯಮಿತವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಕರವೇ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಬುಧವಾರದಂದು ಪ್ರತಿಭಟನೆ ನಡೆಯಿಸಿ ಘಟಪ್ರಭಾ ಹೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಿಗೆ ಮನವಿ ಅರ್ಪಿಸಿದರು
ಕಳೆದ ಒಂದು ತಿಂಗಳಿನಿಂದ ತಾಲೂಕಿನ ಪಾಮಲದಿನ್ನಿ ಬಡಿಗವಾಡ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ಸಾಯಂಕಾಲ 6 ಘಂಟೆಯಿಂದ ಮುಂಜಾನೆ 5;ಘಂಟೆಯ ವರೆಗೆ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇದರಿಂದ ಗ್ರಾಮದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಗ್ರಾಮದಲ್ಲಿ ರೈತರು ಅರಿಶಿನ ಬೆಳೆಯ ರಾಶಿ ಮಾಡಿ ಹೊಲದಲ್ಲಿ ಒಣಗಿಸಲು ಹಾಕಿರುತ್ತಾರೆ. ವಿದ್ಯುತ್ ಇಲ್ಲದ ಕಾರಣ ಹೊಲದಲ್ಲಿ ಒಣಹಾಕಿದ್ದ ಅರಿಶಿನ ಕಳ್ಳತನ ಆಗುವ ಆಂತಕ ರೈತರಿಗೆ ಕಾಡತೊಡಗಿದೆ. ಇದಲದೆ ಮನೆಯಲ್ಲಿ ಗೃಹಣಿಯರಿಗೆ ಅಡುಗೆ ಮಾಡಲು ಸಹ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಾಯಂಕಾಲ 6 ರಿಂದ ಬೆಳಿಗ್ಗೆ 5 ಘಂಟೆಯವರೆಗೆ ಸಿಂಗಲ್ ಪೀಸ್ ವಿದ್ಯುತ್ ಪೂರೈಸಬೇಕು ಮತ್ತು ಬೆಳಗ್ಗೆ 5 ರಿಂದ ಮದ್ಯಾಹ್ನ 12 ರ ವರೆಗೆ ಮೂರು ಪೀಸ್ ವಿದ್ಯುತ್ ಪೂರೈಸಬೇಕು ಈ ಭಾಗದ ರೈತರು, ವಿದ್ಯಾರ್ಥಿಗಳು ಮತ್ತು ಗೃಹಣಿಯರು ಪಡುತ್ತಿರುವ ಗೋಳಿನಿಂದ ಪಾರು ಮಾಡಬೇಕು ಎಂದು ಕರವೇ ತಾಲೂಕು ಘಟಕವು ಮನವಿಯಲ್ಲಿ ವಿನಂತಿಸಿದೆ.
ಈ ಸಂದರ್ಭದಲ್ಲಿ ಕರವೇ ಗೋಕಾಕ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ, ಹನಿಫ ಸನದಿ, ಪಪ್ಪು ಹಂದಿಗುಂದ, ಮಲ್ಲು ಸಂಪಗಾರ, ರಮೇಶ್ ಕಮತಿ, ಬಸವರಾಜ ಗಾಡಿವಡ್ಡರ, ಬಸವರಾಜ ಹಂಜಿ, ಭರಮಪ್ಪ ಪೂಜೇರಿ, ಸಂತೋಷ ಭಜಂತ್ರಿ, ಗಣಪತಿ ಜಾಗನೂರ,ಕರೆಪ್ಪ ಹೊರಟ್ಟಿ, ರಾಮಸಿದ್ದ ತೋಳಿ, ಚಂದ್ರವ ಹಣಜಿ,ಬಾಳವ್ವ ಹಣಜಿ,ತಂಗೆವ್ವ ಸಂಪಗಾರ,ಬಸವರಾಜ ಹಿರೇಮಠ, ಜಡೆಪ್ಪ ಸಂಪಗಾರ,ಶಾಂತವ್ವ ಶಿವಾಪೂರೆ,ವಿಠಲ ವಗ್ಗನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.