ಗೋಕಾಕ:ಸೌಹಾರ್ದ ಸಹಕಾರಿಗಳು ಜನರ ಆರ್ಥಿಕ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ : ಶಾಸಕ ರಮೇಶ

ಸೌಹಾರ್ದ ಸಹಕಾರಿಗಳು ಜನರ ಆರ್ಥಿಕ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ : ಶಾಸಕ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ,ಗೋಕಾಕ ಮೇ 5 :
ಸೌಹಾರ್ದ ಸಹಕಾರಿಗಳು ಜನರ ಆರ್ಥಿಕ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಗುರುವಾರದಂದು ನಗರದಲ್ಲಿ ಶಾಸಕ ಬಸನಗೌಡ ಯತ್ನಾಳ ಅವರ ಅಧ್ಯಕ್ಷತೆಯ ಸಿದ್ದ ಶ್ರೀ ಸೌಹಾರ್ದ ಸಹಕಾರಿಯ 146ನೇ ನೂತನ ಗೋಕಾಕ ಶಾಖೆಯ ಉದ್ಘಾಟನೆಯ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಸಹಕಾರಿ ನಿಯಮಿತಗಳ ಸೇವಾ ಭಾವನೆಯಿಂದ ಜನರ ಆರ್ಥಿಕ ಪ್ರಗತಿಗೆ ಶ್ರಮ ವಹಿಸುತ್ತಿವೆ. ಜನತೆ ಇವುಗಳ ಸದುಪಯೋಗದಿಂದ ತಾವು ಆರ್ಥಿಕವಾಗಿ ಪ್ರಗತಿಹೊಂದಿ ಸಂಸ್ಥೆಗಳ ಅಭಿವೃದ್ಧಿಗೆ ಸಹಕರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದ ಶ್ರೀ ಸೌಹಾರ್ದ ಸಹಕರಾರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಉಮೇಶ ಹಾರಿವಾಳ, ವಲಯ ಅಧಿಕಾರಿ ಸುರೇಶ್ ಬೆಳ್ಳುಬ್ಬಿ , ಶಾಖಾ ವ್ಯವಸ್ಥಾಪಕರಾದ ದರ್ಶನ ಉಪಾಧ್ಯೆ , ಅನಿಲಕುಮಾರ ಮೇಟಿ, ಶಿವಾನಂದ ಜುಲಪಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ಆನಂದ ಪಾಟೀಲ, ಹುಬ್ಬಳ್ಳಿ ವಲಯ ಅಧಿಕಾರಿಗಳಾದ ಗೋವಿಂದ ಚವ್ಹಾಣ, ಶ್ರೀನಾಥ್ ಜಹಾಗೀರದಾರ ಇದ್ದರು