ಗೋಕಾಕ:ಸಂಗೀತಕ್ಕೂ ಸಾಹಿತ್ಯಕ್ಕೂ ಅವಿನಾಭಾವ ಸಂಭಂದ ವಿದೆ : ಧರೇಶ ಕುಂಟೋಜಿ
ಸಂಗೀತಕ್ಕೂ ಸಾಹಿತ್ಯಕ್ಕೂ ಅವಿನಾಭಾವ ಸಂಭಂದ ವಿದೆ : ಧರೇಶ ಕುಂಟೋಜಿ
ನಮ್ಮ ಬೆಳೆಗಾವಿ ಇ – ವಾರ್ತೆ,ಗೋಕಾಕ ಫೆ 3 :
ಸಂಗೀತಕ್ಕೂ ಸಾಹಿತ್ಯಕ್ಕೂ ಅವಿನಾಭಾವ ಸಂಭಂದ ವಿದೆ. ಸಾಹಿತ್ಯಕ್ಕೆ ಜೀವ ಬರಲು ಸಂಗೀತ ಅವಶ್ಯಕ ಎಂದು ರಾಯಚೂರಿನ ಉಪನ್ಯಾಸಕ ಧರೇಶ ಕುಂಟೋಜಿ ಹೇಳಿದರು.
ಬುಧವಾರದಂದು ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಗಾನಯೋಗಿ ತಾಲೂಕು ಘಟಕದಿಂದ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಜಯಂತಿತೋತ್ಸವ ನಿಮಿತ್ತ ಹಮ್ಮಿಕೊಂಡ ಸಂಗೀತೋತ್ಸವ ಮತ್ತು ಉಪನ್ಯಾಸ ಕಾರ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತಕ್ಕೆ ಅಘಾದ ಶಕ್ತಿಇದೆ . ಅದೊಂದು ತಪಸ್ಸು ಹಾಗೂ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಮಕ್ಕಳಲ್ಲಿ ನಮ್ಮ ದೇಶಿಯ ಸಂಗೀತದ ಅರಿವು ಮೂಡಿಸಬೇಕು. ತಂತ್ರಜ್ಞಾನ ಬೆಳೆದಂತೆ ಮಾರಕವಾಗುತ್ತಿದೆ. ಇಂದಿನ ಯುವ ಪೀಳಿಗೆ ಅದರ ಅವಲಂಬನೆಯಿಂದ ದಾರಿ ತಪ್ಪುತ್ತಿದ್ದಾರೆ. ಅವರಿಗೆ ಸಂಗೀತ , ಸಾಹಿತ್ಯ ಕಲೆಯಲ್ಲಿ ತೊಡಗಿಸಿಕೊಳ್ಳವಂತೆ ಪ್ರೇರೆಪಿಸಿ ವಿಕೃತರಾಗುತ್ತಿರುವ ಅವರನ್ನು ಸನ್ಮಾರ್ಗಕ್ಕೆ ತರಲು ಪಾಲಕರು ಆಸಕ್ತಿ ವಹಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಗೀತ ಪರಿಷತ್ತಿನ ತಾಲೂಕು ಅಧ್ಯಕ್ಷೆ ವಿದ್ಯಾ ಮಗದುಮ್ಮ, ಸಂಗೀತ ಗುರುಗಳಾದ ಬಿ.ಸಿ.ದೇಗಾವಿಮಠ , ಮಲ್ಲಿಕಾರ್ಜುನ ವಕ್ಕುಂದ , ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಂತೇಶ ತಾಂವಶಿ , ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ್ ಮಗದುಮ್ಮ ಕಲಾವಿದರಾದ ರವೀಂದ್ರ ಸೋರಗಾಂವಿ , ದಿನೇಶ್ ಜುಗಲಿ, ಅಕ್ಷಯಸ್ವಾಮಿ ದೇಗಾವಿಮಠ ಇದ್ದರು.