RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಪಿಎಸ್‍ಐ ಹುದ್ದೆಗೆ ನೇಮಕಗೊಂಡ ವಿದ್ಯಾರ್ಥಿನಿಗೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಸತ್ಕಾರ

ಗೋಕಾಕ:ಪಿಎಸ್‍ಐ ಹುದ್ದೆಗೆ ನೇಮಕಗೊಂಡ ವಿದ್ಯಾರ್ಥಿನಿಗೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಸತ್ಕಾರ 

ಪಿಎಸ್‍ಐ ಹುದ್ದೆಗೆ ನೇಮಕಗೊಂಡ ವಿದ್ಯಾರ್ಥಿನಿಗೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಸತ್ಕಾರ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 28 :

 
ಗೋಕಾಕ ತಾಲೂಕಿನ ಇಬ್ಬರು ಯುವತಿಯರು ಮತ್ತು ಒರ್ವ ಯುವಕ ಸೇರಿ ಮೂವರು ಪಿಎಸ್‍ಐ ಹುದ್ದೆಗೆ ನೇಮಕಗೊಂಡಿದ್ದು, ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ನೂತನ ಸಿವಿಲ್ ಪೋಲಿಸ್ ಸಬ್ ಇನ್ಸಪೆಕ್ಟರ್ ಪರೀಕ್ಷೆಯಲ್ಲಿ ಆಯ್ಕೆಯಾದ ಮಲ್ಲಾಪೂರ ಪಿಜಿ ಪಟ್ಟಣದ ಕುಮಾರಿ ಚೈತ್ರಾ ಹನಮಂತ ಗಿಡ್ಡೂರ, ಮಮದಾಪೂರ ಗ್ರಾಮದ ಕೀರ್ತಿ ನಿಂಗಪ್ಪ ಕಮತ, ಶಿವಾಪೂರ(ಕೊ) ಗ್ರಾಮದ ಕಿರಣ ಬಸನಗೌಡ ಪಾಟೀಲ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಜಿಪಂ ಮಾಜಿ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಕಾಂತು ಎತ್ತಿನಮನಿ, ಸುರೇಶ ಸನದಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ ಸೇರಿದಂತೆ ಅನೇಕರು ಇದ್ದರು.

Related posts: