RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಈಗ ಎನೂ ಹೇಳಲ್ಲ ಮುಂದಿನ ದಿನಗಳಲ್ಲಿ ಡಿಕೆಶಿ ಬಗ್ಗೆ ಮಾತನಾಡುತ್ತೇನೆ : ರಿಜಲ್ಟ್ ನಂತರ ಶಾ‌ಸಕ ರಮೇಶ ಪ್ರತಿಕ್ರಿಯೆ

ಗೋಕಾಕ:ಈಗ ಎನೂ ಹೇಳಲ್ಲ ಮುಂದಿನ ದಿನಗಳಲ್ಲಿ ಡಿಕೆಶಿ ಬಗ್ಗೆ ಮಾತನಾಡುತ್ತೇನೆ : ರಿಜಲ್ಟ್ ನಂತರ ಶಾ‌ಸಕ ರಮೇಶ ಪ್ರತಿಕ್ರಿಯೆ 

ಈಗ ಎನೂ ಹೇಳಲ್ಲ ಮುಂದಿನ ದಿನಗಳಲ್ಲಿ ಡಿಕೆಶಿ ಬಗ್ಗೆ ಮಾತನಾಡುತ್ತೇನೆ : ರಿಜಲ್ಟ್ ನಂತರ   ಶಾ‌ಸಕ ರಮೇಶ ಪ್ರತಿಕ್ರಿಯೆ

ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಡಿ 15 : 

“ಡಿ.ಕೆ. ಶಿವಕುಮಾರ್ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಬಿಜೆಪಿ ನಾಯಕರಿಂದ ಹಾಗೂ ಸಂಘದಿಂದ ನನಗೆ ಫೋನ್ ಬಂತು. ಹಾಗಾಗಿ ನಾನು ಸದ್ಯಕ್ಕೆ ಏನೂ ಮಾತನಾಡುವುದಿಲ್ಲ. ನಾನು ದೊಡ್ಡ ಬಾಂಬ್ ಸಿಡಿಸಬಹುದು ಆದರೆ ಈಗ ಎನೂ ಹೇಳಲ್ಲ” ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಈ ಕುರಿತು ಬುಧವಾರದಂದು ನಗರದ ತಮ್ಮ ಕಛೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಬೆಳಗಾವಿ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋಲುವುದಕ್ಕೆ ಕಾರಣ ಮುಂದಿನ ದಿನದಲ್ಲಿ ಹೇಳುತ್ತೇನೆ. ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಿ ಬಳಿಕ ಹೇಳಿಕೆ ನೀಡುತ್ತೇನೆ” ಎಂದರು.

ಡಿ.ಕೆ. ಶಿವಕುಮಾರ್ ಬಗ್ಗೆ ನಾನು ಸದ್ಯಕ್ಕೆ ಏನೂ ಮಾತನಾಡುವುದಿಲ್ಲ. ನಾನು ದೊಡ್ಡ ಬಾಂಬ್ ಸಿಡಿಸಬಹುದು ಆದರೆ ಎನೂ ಹೇಳಲ್ಲ. ನಮ್ಮ ಪಕ್ಷ ಸೋಲಬಾರದಿತ್ತು ಸೋತಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರಿಗೆ ಭಯ ಶುರುವಾಗಿದೆ, ವೇಸ್ಟ್ ಬಾಡಿ. ಹಿಂದುಳಿದವರ ಪ್ರಮುಖ ನಾಯಕ ಹೊರ ಬೀಳುತ್ತಿದ್ದಾನೆ. ಕುರುಬರೆಲ್ಲರೂ ಸಿದ್ದರಾಮಯ್ಯರನ್ನು ರಿಜೆಕ್ಟ್ ಮಾಡಿದ್ದಾರೆ. ಹೀಗಾಗಿ ತನಗೆ ಚ್ಯುತಿ ಬರುತ್ತೆ ಎಂದು ಅವರು ಹೆದರಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

Related posts: