RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಯುವ ಪೀಳಿಗೆ ಕ್ರೀಡೆಗಳಲ್ಲಿ ಪಾಲ್ಗೊಂಡು ಸದೃಢ ಆರೋಗ್ಯವಂತರಾಗಿ : ತಾಂವಶಿ

ಗೋಕಾಕ:ಯುವ ಪೀಳಿಗೆ ಕ್ರೀಡೆಗಳಲ್ಲಿ ಪಾಲ್ಗೊಂಡು ಸದೃಢ ಆರೋಗ್ಯವಂತರಾಗಿ : ತಾಂವಶಿ 

ಯುವ ಪೀಳಿಗೆ ಕ್ರೀಡೆಗಳಲ್ಲಿ ಪಾಲ್ಗೊಂಡು ಸದೃಢ ಆರೋಗ್ಯವಂತರಾಗಿ : ತಾಂವಶಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 1 :

 
ಯುವ ಪೀಳಿಗೆ ಕ್ರೀಡೆಗಳಲ್ಲಿ ಪಾಲ್ಗೊಂಡು ಸದೃಢ ಆರೋಗ್ಯವಂತರಾಗಿ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಂತೇಶ ತಾಂವಶಿ ಹೇಳಿದರು.

ಮಂಗಳವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಗೋಕಾಕ ಸ್ಟೋರ್ಸ ಕ್ಲಬ್ ನವರು ಹಮ್ಮಿಕೊಂಡ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ನಗರದ 25ನೇ ವಾರ್ಡ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.

ಇಂದಿನ ತಾಂತ್ರಿಕ ಯುಗದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಂತರಾಗಿ, ಸೋಲು ಗೆಲುವಿಗೆ ಮಹತ್ವ ನೀಡದೆ ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಸಾಧಕರಾಗಬೇಕೆಂದು ದು ಹಾರೈಸಿದರು.
ಈ ಸಂದರ್ಭದಲ್ಲಿ ಅಂಜುಮನ ಕಮಿಟಿ ಅಧ್ಯಕ್ಷ ಜಾವೇದ ಗೋಕಾಕ ,ನಗರಸಭಾ ಸದಸ್ಯ ಬಾಬು ಮುಳಗುಂದ, ಕಮಿಟಿ ಅಧ್ಯಕ್ಷ ಯೂಸುಫ್ ವಂಟಮೂರಿ, ಸಮಿವುಲ್ಲಾ ಜಮಾದರ, ಮುಖಂಡರಾದ ಸುನೀಲ ಭಗತ, ಹಾಜಿ ಅಬ್ದುಲ್ ಗಫಾರ ಕಾಗಜಿ, ಶಕೀಲ ಜಮಾದರ, ಬಾಬು ಶೇಖಬಡೆ, ವಿಶ್ವಸಾಥ ಬಿಳ್ಳೂರ, ಸೇರಿದಂತೆ ಅನೇಕರು ಇದ್ದರು.

Related posts: