RNI NO. KARKAN/2006/27779|Wednesday, January 28, 2026
You are here: Home » breaking news » ಗೋಕಾಕ:ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ : ದ್ವಿಚಕ್ರ ವಾಹನ ಸವಾರರಿಗೆ ಪಿ.ಎಸ್.ಐ ಕೆ.ವಾಲಿಕರ ಎಚ್ಚರಿಕೆ

ಗೋಕಾಕ:ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ : ದ್ವಿಚಕ್ರ ವಾಹನ ಸವಾರರಿಗೆ ಪಿ.ಎಸ್.ಐ ಕೆ.ವಾಲಿಕರ ಎಚ್ಚರಿಕೆ 

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ : ದ್ವಿಚಕ್ರ ವಾಹನ ಸವಾರರಿಗೆ ಪಿ.ಎಸ್.ಐ ಕೆ.ವಾಲಿಕರ ಎಚ್ಚರಿಕೆ

ಗೋಕಾಕ ಜ 1 : ಜೀವನ ಅಮೂಲ್ಯವಾದುದು. ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ವಾಹನ ಚಾಲನೆ ಮಾಡಬೇಕು ವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾವಣೆ ಮಾಡಿದರೆ 500 ರೂಪಾಯಿ ದಂಡ ವಿಧಿಸದಾಗುವುದು ಎಂದು ಶಹರ ಠಾಣೆ ಪಿಎಸ್ಐ ಕೆ.ವಾಲಿಕರ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜನವರಿ 4 ರಂದು ನಗರದಲ್ಲಿ ರಸ್ತೆ ಸುರಕ್ಷತಾ ಹಾಗೂ ಸಂಚಾರ ನಿಯಮ ಪಾಲನಾ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಅಷ್ಟರೋಳಗೆ ಎಲ್ಲ ವಾಹನ ಸವಾರರು ಹೆಲ್ಮೆಟ್ಖ ಖರೀದಿಸಿ ಕಡ್ಡಾಯವಾಗಿ ಹೆಲ್ಮೆಟ್ ಧರಸಿಕೊಂಡು ದ್ವಿಚಕ್ರ ವಾಹನ ಸವಾರಿ ಮಾಡಬೇಕು.ನಂತರದ ದಿನಗಳಲ್ಲಿ ಹೆಲ್ಮೆಟ್ ಧರಿಸಿದ ವಾಹನ ಸವಾರರನ್ನು ತಡೆದು ರೂ 500.ದಂಡ ಹಾಕಲಾಗುವುದು ಎಂದಿರುವ ಅವರು ರಸ್ತೆ ಅಪಘಾತಗಳು ಸಂಭವಿಸಿ ಸಾವು ನೋವು ಉಂಟಾಗಲು ವಾಹನ ಚಾಲಕರ ಅಜಾಗರೂಕತೆಯೇ ಮುಖ್ಯ ಕಾರಣ. ಬೈಕ್ ಸೇರಿದಂತೆ ಯಾವುದೇ ವಾಹನ ಚಾಲನೆ ಮಾಡುವ ವ್ಯಕ್ತಿ ಚಾಲನಾ ಪರವಾನಗಿ ಜತೆಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಜಾಗೃಕತೆಯಿಂದ ವಾಹನ ಚಲಾಯಿಸಿದರೆ ಅಪಘಾತಗಳನ್ನು ತಪ್ಪಿಸಲು ಸಾಧ್ಯ ಆ ನಿಟ್ಟಿನಲ್ಲಿ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲಾಯಿಸಬೇಕು ಇಲ್ಲದಿದ್ದರೆ ದಂಡವನ್ನು ವಿಧಿಸಲಾಗುವುದು ಎಂದು ಎಸ್.ಐ ಕೆ‌.ವಾಲಿಕರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ರವಿವಾರದಂದು ನಗರದ ಗ್ರಾಮೀಣ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹಾಂತೇಶ ಮನ್ನಿಕೇರಿ ಹೆಲ್ಮೆಟ್ ಹಾಕದೇ ವಾಹನ ಚಲಾಯಿಸಿದ ಹಿನ್ನಲೆಯಲ್ಲಿ ಎಸ್.ಪಿ. ಭೀಮಶಂಕರ್ ಗುಳೇದ ಹೆಡ್ ಕಾನ್ಸಟೇಬಲ್ ಮನ್ನಿಕೇರಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ವಾಲಿಕರ ಅವರು ಈ ಪ್ರಕಟಣೆಯನ್ನು ನೀಡಿದ್ದಾರೆ

Related posts: