RNI NO. KARKAN/2006/27779|Monday, July 14, 2025
You are here: Home » breaking news » ಘಟಪ್ರಭಾ:ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಗಂಗಾಧರ ಮಾಳಗಿ

ಘಟಪ್ರಭಾ:ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಗಂಗಾಧರ ಮಾಳಗಿ 

ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಗಂಗಾಧರ ಮಾಳಗಿ

ಘಟಪ್ರಭಾ ಜ 8 : ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದ ಗೊಕಾಕ ಜ್ಞಾನದೀಪ ಕಾಲೇಜಿನ ಕನ್ನಡ ಪ್ರಾದ್ಯಾಪಕರಾದ ಗಂಗಾಧರ ಮಾಳಗಿ ಹೇಳಿದರು.
ಅವರು ಇತ್ತೀಚಿಗೆ ಮಲ್ಲಾಪೂರ ಪಿ.ಜಿ ಪಟ್ಟಣದ ನೀಡ್ಸ್ ಶಿಕ್ಷಣ ಸಂಸ್ಥೆಯ ಶ್ರೀಮತಿ ಅಕ್ಕುತಾಯಿ ಆದರ್ಶ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 12ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಜಿ.ಬಿ.ಬಡಕುಂದ್ರಿ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ 7ನೇ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ, ಪಾಲಕರು ಮಕ್ಕಳಿಗೆ ಆಸ್ತಿ ಮಾಡುವದನ್ನು ಬಿಟ್ಟು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು. ಅವರನ್ನು ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವದರೊಂದಿಗೆ ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಉತ್ತಮ ಪರಿಸರದಲ್ಲಿ ನಿರ್ಮಾಣವಾದ ಇಂತಹ ಶಾಲೆಗಳಲ್ಲಿ ಕಲಿತ ಮಕ್ಕಳು ಉನ್ನತ ಸ್ಥಾನ ಅಲಂಕರಿಸುವದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.
ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ವಹಿಸಿದ್ದರು. ಚಿಕ್ಕೋಡಿ ಡಿ.ಡಿ.ಪಿ.ಐ ಕಛೇರಿಯ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿಯವರು ಸತ್ಕಾರ ಸ್ವೀಕರಿಸಿ ಮಾತನಾಡಿದರು.
ನೀಡ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರವಿಂದ ಬಡಕುಂದ್ರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಘಟಪ್ರಭಾ ಸಿ.ಆರ್.ಸಿ ಕೆ.ಡಿ. ಪಾಟೀಲ ಆಗಮಿಸಿದ್ದರು.
ಪ್ರಾಥಮಿಕ ಶಾಲೆಯ ವರದಿವಾಚನ ಮುಖ್ಯೋಪಾದ್ಯಾಯನಿ ಮಾಲಾ ಹೊಸಪೇಟೆ, ಕಾಲೇಜಿನ ವರದಿವಾಚನ ಪ್ರಾದ್ಯಾಪಕ ಬಿ.ಎಲ್.ಮಗದುಮ್ ಮಾಡಿದರು.
ಉಪನ್ಯಾಸಕ ಆರ್.ಎ.ಮರೆಪ್ಪಗೋಳ ಸ್ವಾಗತಿಸಿದರು. ಜಿ.ಬಿ.ಚೌಗಲಾ ನಿರೂಪಿಸಿ, ಎ.ಎಲ್.ಮುಲ್ತಾನಿ ವಂದಿಸಿದರು.
ನಂತರ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರಗಿದವು.

Related posts: