RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸರಕಾರಿ ಹಿರಿಯ ಗಂಡು ಮಕ್ಕಳ ಶಾಲೆಗೆ ಸುಣ್ಣ -ಬಣ್ಣ ಹಚ್ಚಿದ ಸತೀಶ ಜಾರಕಿಹೊಳಿ ಪೌಂಡೇಶನ್ ಕಾರ್ಯಕರ್ತರು

ಗೋಕಾಕ:ಸರಕಾರಿ ಹಿರಿಯ ಗಂಡು ಮಕ್ಕಳ ಶಾಲೆಗೆ ಸುಣ್ಣ -ಬಣ್ಣ ಹಚ್ಚಿದ ಸತೀಶ ಜಾರಕಿಹೊಳಿ ಪೌಂಡೇಶನ್ ಕಾರ್ಯಕರ್ತರು 

ಸರಕಾರಿ ಹಿರಿಯ ಗಂಡು ಮಕ್ಕಳ ಶಾಲೆಗೆ ಸುಣ್ಣ -ಬಣ್ಣ ಹಚ್ಚಿದ ಸತೀಶ ಜಾರಕಿಹೊಳಿ ಪೌಂಡೇಶನ್ ಕಾರ್ಯಕರ್ತರು

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 28 :

 
ತಾಲೂಕಿನ ಕೊಣ್ಣೂರ ಗ್ರಾಮದ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಗೆ ರವಿವಾರದಂದು ಸತೀಶ ಜಾರಕಿಹೊಳಿ ಪೌಂಡೇಶನ್ ಕಾರ್ಯಕರ್ತರು ಸ್ಶಚ್ಚ ಗೋಳಿಸಿ, ಸುಣ್ಣ-ಬಣ್ಣ ಹಚ್ಚಿ ಎಲ್ಲರ ಗಮನ ಸೆಳೆದರು.

ಕಳೆದ ಎರೆಡು ತಿಂಗಳಿನಿಂದ ಪ್ರತಿ ರವಿವಾರ ಗೋಕಾಕ ನಗರ ಹಾಗೂ ತಾಲೂಕಿನ ಕೆಲವು ಕಡೆಗಳಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಸರಕಾರಿ ಕಛೇರಿ ಆವರಣ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಈ ಬಾರಿ ಕೊಣ್ಣೂರ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರ ವಿನಂತಿಯಂತೆ ಶಾಲೆಯನ್ನು ಸ್ವಚ್ಛಗೋಳಿಸಿ ಸುಣ್ಣ ಬಣ್ಣ ಹಚ್ಚಿ ಸುಂದರ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪೌಂಡೇಶನ್ ನ ಜುಬೇರ ಮಿರ್ಜಾಬಾಯಿ,ಪ್ರವೀಣ ಕಳ್ಳಿಮನಿ, ದುರ್ಯೋಧನ ಕಡಕೋಳ, ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್.ನನ್ನದೆಪ್ಪನವರ, ಶಿಕ್ಷಕ ಎಂ.ಎಂ ಪೀರಜಾದೆ, ವಿನೋದ್ ಮೋರದ, ಸತೀಶ ಕೋಳಕ್ಕಿ, ಸುನೀಲ ಬಿರಡಿ, ಸಮರಿಯಾ ಭಜಂತ್ರಿ, ರಪೀಕ ಕುಂಬಾರಿ, ಪ್ರಜ್ವಲ್ ನಾಯಿಕ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: